ಡೈಲಿ ವಾರ್ತೆ: 09/DEC/2023
ಉಳ್ಳಾಲ: ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಉಳ್ಳಾಲ: ಸೋಮೇಶ್ವರ ಸಮುದ್ರತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾದ ಘಟನೆ ಶನಿವಾರ ನಡೆದಿದೆ.
ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯುಸಿ ಕಾಲೇಜಿನ ಯಶ್ವಿತ್ (18) ಹಾಗೂ ಯುವರಾಜ್ (18) ಸಮುದ್ರಪಾಲಾದ ವಿದ್ಯಾರ್ಥಿಗಳು. ಇವರಿಬ್ಬರು ಮಂಜೇಶ್ವರದ ಕುಂಜತ್ತೂರು, ಅಡ್ಕ ನಿವಾಸಿಗಳು.
ಸಮುದ್ರ ತೀರದಲ್ಲಿ ಆಟವಾಡುವ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಇಬ್ಬರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.