ಡೈಲಿ ವಾರ್ತೆ: 30/DEC/2023

ಉಡುಪಿಯ ಪ್ರಸಿದ್ಧ ಬಟ್ಟೆ‌ಮಳಿಗೆಯಲ್ಲಿ ಮಿಸ್ ಫೈರಿಂಗ್, ಓರ್ವನಿಗೆ ಗಾಯ

ಉಡುಪಿ: ನಗರದ ಪ್ರಸಿದ್ಧ ಬಟ್ಟೆ‌ಮಳಿಗೆಯಲ್ಲಿ ಮಿಸ್ ಫೈರಿಂಗ್ ಆಗಿ ಓರ್ವನಿಗೆ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಬಟ್ಟೆ ಮಳಿಗೆಯ ಒಳಗೆ ವಾರಿಸುದಾರರಿಲ್ಲದ ಗನ್ ಪತ್ತೆಯಾಗಿದ್ದು ಅದನ್ನು ಮಳಿಗೆ ಸಿಬ್ಬಂದಿಗಳು ಕುತೂಹಲದಿಂದ ಗನ್ ಪರಿಶೀಲಿಸುವಾಗ ಮಿಸ್ ಫೈರ್ ಆಗಿ ಮಳಿಗೆ ಸಿಬ್ಬಂದಿಯೋರ್ವನಿಗೆ ಗುಂಡು ತಗಲಿ ಗಾಯಗೊಂಡಿರುತ್ತಾನೆ.
ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್ ಯಾರದ್ದು? ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಅನ್ನೋದರ ಕುರಿತು ತನಿಖೆ ನಡೆಸುತ್ತಿದ್ದಾರೆ.