ಡೈಲಿ ವಾರ್ತೆ: 31/DEC/2023

– ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು )

ಗತಿಸಿ ಹೋದ ಕಾಲಘಟ್ಟವನ್ನು ಮರೆತು ಹೊಸ ವರುಷದದತ್ತ ಪಯಣ….!”2024 ಸ್ವಾಗತಿಸಲು ದೇಶವೇ ಸನ್ನಿದ್ದ ….!” ಕಹಿ ನೆನಪುಗಳ ಮೆರವಣಿಗೆ ಮೇಲೆ, ಹೊಸ ಚೇತನಗಳ ವಿಜಯದ ಮಾಲೆ….!”2023 ರ ವಿದಾಯ….2024 ರ ಶುಭೋದಯ….!” ಬಾಳ ನೆನಪಿನ ನಡಿಗೆ ನಿರಂತರ…..!”

“ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು…,2024 ರ ಭವ್ಯ ಸ್ವಾಗತದೊಂದಿಗೆ……!”

ವರ್ಷದಿಂದ ವರ್ಷಕ್ಕೆ ನಾವು ದೊಡ್ಡವರಾಗುತ್ತಿದ್ದೇವೆ. ನಮ್ಮ ಆಯುಷ್ಯ ಮತ್ತು ನಮ್ಮ ವರ್ಷಗಳು ತನ್ನಿಂದ ತಾನೇ ಸರಾಗವಾಗಿ ಸಾಗುತ್ತಿರುತ್ತವೆ. ಅದೇ ರೀತಿ ಹೊಸ ವರ್ಷ ಬಂದಾಗೆಲ್ಲ ಮನಸ್ಸಿನ ಭಾವನೆಗಳನ್ನ ಅಭಿವ್ಯಕ್ತಿ ಪಡಿಸುವಂತಹ ಕಾಲಘಟ್ಟವೇ ಜನವರಿ 01…, ಜನವರಿ ಒಂದರಂದು ನಾವು ಹಾಕಿಕೊಂಡಿರುವ ಅಂತ ಕೆಲವು ತೀರ್ಮಾನಗಳು ಡಿಸೆಂಬರ್ 31ರ ತನಕ ತಾಳ್ಮೆಯಿಂದ ಉಳಿಯುವುದು ಕಷ್ಟ ಸಾಧ್ಯ. ಆದರೂ ಮನಸ್ಸಿನಲ್ಲಿ ಏನೋ ಒಂದು ಹುರುಪಿನಂತೆ ಜನವರಿ ತಿಂಗಳ ಪ್ರಾರಂಭದಲ್ಲಿಯೇ ನಮ್ಮ ಬದುಕು ವಿಶೇಷವಾಗಿ ರೂಪಿಸಿಕೊಳ್ಳಬೇಕು. ಈ ವರ್ಷದ ಯೋಜನೆಯನ್ನ ನಾವು ವಿಭಿನ್ನ ರೀತಿಯಲ್ಲಿ ಪ್ರಕಾಶಿಸಬೇಕು ಎನ್ನುವುದು ನಮ್ಮ ತಳಹದಿ ಮಟ್ಟದ ಅನುಕೂಲದ ಮಾತು ಆದರೆ. ಜನವರಿ ಒಂದರಂದು ವಿಶೇಷ ರೀತಿಯಲ್ಲಿ ನಾವು ಸ್ವಾಗತಿಸುವ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎನ್ನುತ್ತೇವೆ ಆದರೆ ಭಾರತೀಯರಾದ ನಾವು ಯುಗಾದಿಯೊನ್ನ ಹೊಸ ವರುಷವೆಂದು ಪ್ರೀತಿಯಿಂದ ಸ್ವಾಗತಿಸುತ್ತೇವೆ ಆಚರಿಸುತ್ತೇವೆ ಅದೇ ರೀತಿ ಹೊಸ ಉಡುಪುಗಳನ್ನು ಅಭಿವ್ಯಕ್ತವಾಗಿ ಸ್ವತಂತ್ರಗೊಳಿಸುವ ಬದುಕು ನಮ್ಮದಾಗುವ ಜೊತೆಗೆ ನಿಷ್ಕಲ್ಮಶವಾದಂತ ಜೀವನವು ಹೊಸ ವರ್ಷಕ್ಕೆ ಅತ್ಯಂತ ಬದುಕಿನ ಸುಂದರತೆಯನ್ನು ತಂದು ಕೊಡುತ್ತದೆ ಹೊಸ ವರುಷ ಜೀವನದ ಕೊನೆವರೆಗೂ ಕೂಡ ನವವುಲ್ಲಾ ಸದಾ ಜೀವನವನ್ನು ಹೊಸ ಹುರುಪಿನೊಂದಿಗೆ ನಾವು ಕಳೆಯಬೇಕಾಗುತ್ತದೆ. ನಾವು ಕಟ್ಟಿಕೊಂಡಿರುವ ಕೆಲವು ಜೀವನದ ಸಂಗತಿಗಳು ನಮ್ಮನ್ನ ಮತ್ತೆ ಮತ್ತೆ ಉರಿದುಂಬಿಸುವಂತೆ ಮಾಡುವುದು ಜನವರಿ. ಆ ಕಾರಣಕ್ಕಾಗಿ ಜನವರಿ 01 ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನಾವು ಬದುಕು ಮತ್ತು ಬದುಕಿ ಗೋಸ್ಕರ ನಾವು ಇಟ್ಟುಕೊಂಡಂತಹ ಗುರಿ ಜನವರಿ ಹೀಗಾಗಿ ಸೀಮಿತವಾಗದೆ, ವರ್ಷ ಪೂರ್ತಿ ಕೂಡ ಸಾಗಬೇಕು ಆ ಸಾಗುವಂತ ನಿಟ್ಟಿನಲ್ಲಿ ನಾವೆಲ್ಲರೂ ಬದುಕಿನ ಇತ್ಯಾರ್ಥವನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಹೊಸ ವರ್ಷ ಸಾರ್ಥಕ….!”

ಇತರ ಸಂಸ್ಕೃತಿಗಳು ತಮ್ಮ ಸಾಂಪ್ರದಾಯಿಕ ಅಥವಾ ಧಾರ್ಮಿಕ ಹೊಸ ವರ್ಷದ ದಿನವನ್ನು ತಮ್ಮದೇ ಆದ ಪದ್ಧತಿಗಳ ಪ್ರಕಾರ ಆಚರಿಸುತ್ತಾರೆ, ವಿಶಿಷ್ಟವಾಗಿ (ಏರಿಲ್ಲದಿದ್ದರೂ) ಅವರು ಅಥವಾ ಚಂದ್ರನ ಕ್ಯಾಲೆಂಡರ್ ಅನ್ನು ಬಳಸುತ್ತಾರೆ . ಚೈನೀಸ್ ಹೊಸ ವರ್ಷ , ಇಸ್ಲಾಮಿಕ್ ಹೊಸ ವರ್ಷ , ತಮಿಳು ಹೊಸ ವರ್ಷ ( ಪುತಾಂಡು ), ಮತ್ತು ಯಹೂದಿ ಹೊಸ ವರ್ಷಗಳು ಪ್ರಸಿದ್ಧ ಉದಾಹರಣೆಗಳಾಗಿವೆ. ಭಾರತ, ನೇಪಾಳ ಮತ್ತು ಇತರ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಚಲಿಸಬಲ್ಲ ತಮ್ಮದೇ ಆದ ಕ್ಯಾಲೆಂಡರ್‌ಗಳ ಪ್ರಕಾರ ದಿನಾಂಕಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತವೆ.

ಫಶ್ಚಿಮ ಯುರೋಪ್‌ನಲ್ಲಿ ಮಧ್ಯಯುಗದಲ್ಲಿ , ಜೂಲಿಯನ್ ಕ್ಯಾಲೆಂಡರ್ ಇನ್ನೂ ಬಳಕೆಯಲ್ಲಿದ್ದಾಗ, ಅಧಿಕಾರಿಗಳು ಹೊಸ ವರ್ಷದ ದಿನವನ್ನು ಸ್ಥಳವನ್ನು ಅವಲಂಬಿಸಿ ಮಾರ್ಚ್ 1, ಮಾರ್ಚ್ 25, ಈಸ್ಟರ್, ಸೆಪ್ಟೆಂಬರ್ 1 ಮತ್ತು ಡಿಸೆಂಬರ್ 25 ಸೇರಿದಂತೆ ಹಲವಾರು ಇತರ ದಿನಗಳಲ್ಲಿ ಒಂದಕ್ಕೆ ಸ್ಥಳಾಂತರಿಸಿದರು . ಅಲ್ಲಿಂದೀಚೆಗೆ, ಪಾಶ್ಚಿಮಾತ್ಯ ಪ್ರಪಂಚದಲ್ಲಿ ಮತ್ತು ಅದರಾಚೆಗಿನ ಅನೇಕ ರಾಷ್ಟ್ರೀಯ ನಾಗರಿಕ ಕ್ಯಾಲೆಂಡರ್‌ಗಳು ಹೊಸ ವರ್ಷದ ದಿನವಾದ ಜನವರಿ 1 ರಂದು ಒಂದು ನಿಗದಿತ ದಿನಾಂಕವನ್ನು ಬಳಸುವುದಕ್ಕೆ ಬದಲಾಗಿವೆ – ಹೆಚ್ಚಿನವರು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡಾಗ ಹಾಗೆ ಮಾಡುತ್ತಾರೆ. ಹಳೆಯ ಕಹಿ ನೆನಪುಗಳನ್ನ ಮರೆತು ಬದುಕಿನ ಸಾಗುವ ನಿರಂತರ ಕಾಲಘಟ್ಟದಲ್ಲಿ ನಾವು ಅದೆಲ್ಲವನ್ನು ಮರೆತು ಸುಂದರ ಬದುಕಿನತ್ತ ಹೆಜ್ಜೆ ಹಾಕುತ್ತ ಜೀವನದ ಜೊತೆಗೆ ಬದುಕಿನ ಕ್ಷಣವನ್ನು ನಾವು ಅನವರತಾ ಕಾಪಾಡಲೇಬೇಕು, ದೃಷ್ಟಿಕೋನವನ್ನು ಮುಗಿಲಾಗಿಸಿಕೊಂಡು ಬದುಕಿನ ಸ್ವತಂತ್ರ ಜೀವನದ ಆತ್ಮಸ್ಥೈರ್ಯ ನಮ್ಮಲ್ಲಿ ಉಳಿದರೆ ಮಾತ್ರ ಬದುಕು ನಿರಂತರ ಮತ್ತು ಸ್ಪಷ್ಟವಾಗಲು ಸಾಧ್ಯವಿಲ್ಲದೆ ನಮಗಿರುವ ಆತ್ಮವಿಶ್ವಾಸ…..!”

ಸಂತಸದ ದಿನವನ್ನು ಸಮೀಪಿಸುತ್ತಿದ್ದು, ಅಂತ ಸಂಭ್ರಮ ನಾವು ಆಟ ಮಾಡಿದಂತಹ ನಾವು ಬೆಳೆದಂತಹ, ಪರಿಸರಗಳು ಮತ್ತೆ ನೆನಪಾಗಿ ಹೊಸ ವರ್ಷದ ತುಳುಕನ್ನ ನಮ್ಮನ್ನ ನೆನಪಿಸುತ್ತದೆ. ವರುಷ ವರುಷ ಕಳೆದರೂ ಮತ್ತೆ ಹರುಷದ ನೆನಪು ಮರೆಯಾಗಿ ಹೋಗುತ್ತದೆ ಗತಿಸಿ ಹೋದ ಘಟನೆಗಳನ್ನ ಮರೆಯುತ್ತ ಹೊಸ ಜೀವನದತ್ತ ಹೆಜ್ಜೆ ಹಾಕುವ ಪ್ರಯತ್ನ ಮಾಡಬೇಕಿದೆ ಇವೆಲ್ಲ ದೃಷ್ಟಿಯಿಂದ ಹೊಸ ವರ್ಷ ಮತ್ತೆ ಜೀವನದಲ್ಲಿ ಬರುತ್ತಲೇ ಇದೆ ಆ ಕಾರಣಕ್ಕಾಗಿ ಸ್ವೀಕರಿಸುವ ಮನೋಭಾವ ಮತ್ತು ಆತ್ಮಸ್ಥೈರ್ಯ ಮತ್ತು ಆರೋಗ್ಯ ಬದುಕಿನ ಜೀವನ ನಮ್ಮದಾಗಬೇಕು ಎನ್ನುವ ಉದ್ದೇಶವೇ ಹೊಸ ವರ್ಷದ ಪಯಣ.

ಹೊಸ ವರುಷದಲ್ಲಿ ಹೊಸತನದ ಕನಸು ಕಾಣುತ್ತಿರುವ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು ಈಡೇರಿಸುವುದರೊಂದಿಗೆ ಬದುಕಿನ ಹಲವಾರು ಸಂಗತಿಗಳನ್ನು ಜೀವನದ ತೊದಲಾಟದಲ್ಲಿ ಬದುಕು ಬದುಕಿಗೋಸ್ಕರ ನಾವು ಮಾಡಿಕೊಂಡಿರುವ ಅಂತಹ ಕೆಲವು ಆಚಾರ ವಿಚಾರಗಳು ನಮ್ಮನ್ನ ಎತ್ತರಕ್ಕೆ ಕೊಂಡಯುತ್ತದೆ ಆ ಸಂಗತಿಯ ವಿಶ್ವ ಶ್ರೇಷ್ಠವೇ ಇಂದಿನ ಈ ಹೊಸ ವರ್ಷದ ಸಂಭ್ರಮ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು ಒಂದಿಗೆ ನಮ್ಮೆಲ್ಲ ಕನಸುಗಳು ನನಸಾಗುವುದರೊಂದಿಗೆ ಆರೋಗ್ಯಕರ ಬದುಕಿನ ಜೀವನ 2024 ಆಗಲಿ ಎನ್ನುವುದೇ ಸದಾಶಯದ ಹುರುಪಿನ ಅಭಿವ್ಯಕ್ತಿ ಯ ಆಶಯ.