ಡೈಲಿ ವಾರ್ತೆ: 11/Jan/2024
ಕೋಟತಟ್ಟು ಗ್ರಾ.ಪಂ. ಮತ್ತು ಸ. ಆ. ಕೇಂದ್ರ ಕೋಟ ಇದರ ಆಶ್ರಯದಲ್ಲಿ ಕೊರಗ ಜನಾಂಗದವರಿಗೆ (PVTG) ಆರೋಗ್ಯ ತಪಾಸಣಾ ಶಿಬಿರ
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಸಮುದಾಯ ಅರೋಗ್ಯ ಕೇಂದ್ರ ಕೋಟ ಇದರ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿನ ಚಿಟ್ಟಿಬೆಟ್ಟುವಿನಲ್ಲಿರುವ ಕೊರಗ ಜನಾಂಗದವರಿಗೆ (PVTG) ಆರೋಗ್ಯ ತಪಾಸಣಾ ಶಿಬಿರವನ್ನು ಜ. 11 ರಂದು ಬುಧವಾರ ನಡೆಸಲಾಯಿತು.
ಈ ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ದಂತ ಆರೋಗ್ಯ ಮತ್ತು ಕ್ಯಾನ್ಸರ್ ಕುರಿತು ಪರೀಕ್ಷೆ ಹಾಗೂ ಚಿಕಿತ್ಸೆ ಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ, ಸಮುದಾಯ ಆರೋಗ್ಯ ಕೇಂದ್ರ ಕೋಟದ ಹಿರಿಯ ದಂತ ಆರೋಗ್ಯಾಧಿಕರಿ ಡಾ. ಅನಾಳಿನಿ , NCD ವೈದ್ಯಾಧಿಕಾರಿ ಡಾ. ಯಶಶ್ರೀ ಶೆಟ್ಟಿ ಹಾಗೂ ತಂಡದವರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಕೊರಗ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.