



ಡೈಲಿ ವಾರ್ತೆ: 30/Jan/2024


ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು
ಹುಣಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಎರಡೂವರೆ ವರ್ಷದ ಚಿರತೆ ಬಲಿಯಾಗಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ನಡೆದಿದೆ.
ಹುಣಸೂರು ನಗರದ ಬೈಪಾಸ್ ನ ಅಯ್ಯಪ್ಪಸ್ವಾಮಿ ಬೆಟ್ಟದ ಬಳಿಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಅಯ್ಯಪ್ಪಸ್ವಾಮಿ ಬೆಟ್ಟದ ಕುರುಚಲು ಕಾಡಿನಿಂದ ಮುಂಜಾನೆ ಆಹಾರ ಅರಸಿ ಬರುತ್ತಿದ್ದ ಚಿರತೆ ವೇಗವಾಗಿ ಚಲಿಸುತ್ತಿದ್ದ ಅಪರಿಚಿತವಾಹನಕ್ಕೆ ಸಿಲುಕಿ ಸಾವನ್ನಪ್ಪಿದ್ದು. ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದವರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿಸಿಎಪ್ ಸೀಮಾ. ಆರ್ ಎಫ್ ಓ ನಂದಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಬಳಿಕ ಕಲ್ ಬೆಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆಯ ದೇಹವನ್ನು ವಿಲೇವಾರಿ ಮಾಡಲಾಯಿತು.