ಡೈಲಿ ವಾರ್ತೆ: 31/Jan/2024
ಬನ್ನಾಡಿ ಸುಬ್ಬಣ್ಣ ಹೆಗ್ಡೆ ಲಯನ್ಸ್ ಪಾರ್ಕ್ ಲೋಕಾರ್ಪಣೆ
ಕೋಟ: ಬನ್ನಾಡಿ ಸುಬ್ಬಣ್ಣ ಹೆಗ್ಡೆ ಲಯನ್ಸ್ ಪಾರ್ಕ್ ನ್ನು ಗೌರವಾನ್ವಿತ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಡಾ. ನೇರಿ ಕರ್ನೇಲಿಯೋ ಹಾಗೂ ಅವರ ಪತ್ನಿ ಜಿಲ್ಲಾ ಲಯನ್ಸ್ ನ ಪ್ರಥಮ ಮಹಿಳೆ ಲಯನ್ ಒಪಿಲಿಯಾ ಪಿಲೋನಿನಾ ಕರ್ನೇಲಿಯೋ ರವರು ಜ. 28 ರಂದು ಭಾನುವಾರ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ಗೆ ಅಧೀಕೃತ ಭೇಟಿ ನೀಡಿದ ಸಂಧರ್ಭ, ಲೋಕಾರ್ಪಣೆ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬನ್ನಾಡಿ ಸುಬ್ಬಣ್ಣ ಹೆಗ್ಡೆಯವರು ಆಗಿನ ಕಾಲದಲ್ಲೇ ಶಿಕ್ಷಣ ತಜ್ನರಾಗಿದ್ದು, ಬನ್ನಾಡಿ & ಮಧುವನದಲ್ಲಿ ಎರಡು ಶಾಲೆಗಳನ್ನು ಆರಂಭಿಸಿ ಸುತ್ತಮುತ್ತಲಿನ ಜನರನ್ನು ಅಕ್ಷರಸ್ಥರನ್ನಾಗಿ ಮಾಡಿದವರು. ಅಂತಹ ಮೇರು ವ್ಯಕ್ತಿತ್ವದ ಅವರ ಹೆಸರಿನಲ್ಲಿ ಬನ್ನಾಡಿ-ವಡ್ಡರ್ಸೆ ಲಯನ್ಸ್ ಕ್ಲಬ್ ನವರು ಲಯನ್ಸ್ ಪಾರ್ಕ್ ಮಾಡಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ ಎಂದರಲ್ಲದೇ ಕೇವಲ 5 ವರ್ಷದ ಹಿಂದೆ ಬನ್ನಾಡಿ ಸೋಮನಾಥ ಹೆಗ್ಡೆ ಯವರ ನೇತೃತ್ವದಲ್ಲಿ ಆರಂಭ ಗೊಂಡು ಎರಡು ವರ್ಷಗಳ ಕಾಲ ಅವರ ಅಧ್ಯಕ್ಷತೆಯಲ್ಲಿ ನಂತರ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ರಾಜಾರಾಮ್ ಶೆಟ್ಟಿ ಯವರ ಅಧ್ಯಕ್ಷೀಯ ಅವಧಿಯಲ್ಲಿ ಸ್ಥಳೀಯವಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು, ಅಂದರೆ ಆರ್ಥಿಕ ಸಂಕಸ್ಟದಲ್ಲಿ ರುವ ವಿದ್ಯಾರ್ಥಿಗಳಿಗೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಆರ್ಥಿಕ ವಾಗಿ ಹಿಂದಳಿದವರಿಗೆ ವೈದ್ಯಕೀಯ ಸಹಾಯ, ಕೊರೋನಾ ಸಂಧರ್ಭದಲ್ಲಿ ಹಸಿದವರಿಗೆ ನೀಡಿದ ಅನ್ನದಾನ, ಲಯನ್ಸ್ ಕ್ಲಬ್ ನ ವ್ಯಾಪ್ತಿಯ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಪರಿಕರಗಳನ್ನು ನೀಡಿರುವುದು, ಹೀಗೆ ಹತ್ತು ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಲಯನ್ಸ್ ಜಿಲ್ಲೆ (ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ) ಯಲ್ಲೇ ಒಂದು ಅತ್ಯುತ್ತಮ ಕ್ಲಬ್ ಆಗಿ ಮೂಡಿ ಬಂದಿದೆ ಎಂದು ಹೇಳಿದರು.
ಹಿರಿಯ ಅನುಭವಿಗಳು ಹಾಗೂ ಯುವ ಮನಸ್ಸುಗಳ ಸಮ್ಮಿಲನದೊಂದಿಗೆ ಈ ಹಿಂದೆ ಪರ್ಮನೆಂಟ್ ಪ್ರಾಜೆಕ್ಟ್ ಅಡಿಯಲ್ಲಿ ಉಪ್ಲಾಡಿ ಬಸ್ ನಿಲ್ದಾಣ, ಬನ್ನಾಡಿ ಬಸ್ ನಿಲ್ದಾಣ, ವಡ್ಡರ್ಸೆ ಬಸ್ ನಿಲ್ದಾಣ, ಮಧುವನ ಬಸ್ ನಿಲ್ದಾಣ ಗಳ ಮರು ನಿರ್ಮಾಣ ಗೊಳಿಸಿದ್ದು ಈದೀಗ ಸುಮಾರು 2 ಲಕ್ಚ ರೂಪಾಯಿ ವೆಚ್ಛದಲ್ಲಿ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಈ ವರ್ಷದ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ-ಅಚ್ಲಾಡಿ, ಕಾರ್ಯದರ್ಶಿ ಲಯನ್ ಮಹೇಂದ್ರ ಆಚಾರ್ ಮಧುವನ ಮತ್ತು ಕೋಶಾಧಿಕಾರಿ ಲಯನ್ ವಸಂತ್ ವಿ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ ಇವರ ಸೇವಾ ಅವಧಿಯಲ್ಲಿ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಲಯನ್ಸ್ ಪಾರ್ಕ್ ನ್ನು ನಿರ್ಮಿಸಿ ಸ್ಥಳೀಯ ಮಕ್ಕಳಿಗೆ ಆಡಲು ಉಪಯೋಗ ಮಾಡಿ ಕೊಟ್ಟಿರುವುದು ಅಭಿನಂದನಾಹ್ರ ಎಂದರು.
ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ ಯವರ ಪ್ರಾರ್ಥನೆ ಮೂಲಕ, ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಕ್ಲಬ್ ನ ಕಾರ್ಯದರ್ಶಿ ಲಯನ್ ಮಹೇಂದ್ರ ಆಚಾರ್ ಮಧುವನ ಈ ವರ್ಷ ಕ್ಲಬ್ ಮಾಡಿದ ಸೇವಾ ಚಟುವಟಿಕೆಗಳ ವರದಿಯನ್ನು ಓದಿ ಹೇಳಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಮಾಜಿ ಪ್ರೆಸಿಡೆಂಟ್ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿbಲಯನ್ ಕೋಡ್ ಆಫ್ ಕಂಡಕ್ಟ್ ಓದಿದರು.
ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಬನ್ನಾಡಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ 25 ಕುರ್ಚಿಗಳನ್ನು ಹಸ್ತತರಿಸಲಾಯಿತು.
ಇದೇ ಸಂಧರ್ಭದಲ್ಲಿ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಪಾರ್ಕ್ ನಿರ್ಮಾಣಕ್ಕೆ ರೂ. 50,000.00 ದ ದೇಣಿಗೆ ಯನ್ನು ನೀಡಿದ ಕುಂದಾಪುರ ಕೋಸ್ಟಲ್ ಲಯನ್ಸ್ ಕ್ಲಬ್ ನಮಾಜಿ ಅಧ್ಯಕ್ಷರೂ ಹಾಗೂ ಕೋಡಿ ಬ್ಯಾರೀಸ್ ಶಾಲೆಯ ಮುಖ್ಯ ಶಿಕ್ಷಕರೂ ಆದ ಲಯನ್ ಜಯಶೀಲ ಶೆಟ್ಟಿ ಕಂದಾವರ ರವರನ್ನು ಸನ್ಮಾನಿಸಲಾಯಿತು,
ಕ್ಲಬ್ ನ ಮುಂದಿನ ಅಧ್ಯಕ್ಷರಾದ ಲಯನ್ ಬಿ.ಬಿ.ಪ್ರವೀಣ್ ಹೆಗ್ಡೆ ಗೌರವಿಸಲ್ಪಟ್ಟ ಶ್ರೀ ಜಯಶೀಲ ಶೆಟ್ಟಿ ಕಂದಾವರ ಇವರ ಪರಿಚಯ ವಾಚಿಸಿದರು.
ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಯವರು ಜಿಲ್ಲಾ ಗವರ್ನರ್ ರವರ ಪರಿಚಯ ವಾಚಿಸಿದರು.
ರೆಸಲ್ಯೂಷನ್ ಆಫ್ ಅಪ್ರಿಸಿಯೇಷನ್ ಟು ಡಿಸ್ಟ್ರಿಕ್ಟ್ ಗವರ್ನರ್” ನ್ನು ಲಯನ್ ಕೊತ್ತಾಡಿ ಅಜಿತ್ ಶೆಟ್ಟಿಯವರು ವಾಚಿಸಿದರು.
ಇದೇ ಸಂದರ್ಭ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ಪ್ರ ಪ್ರಥಮ ಎಮ್.ಜೆ.ಎಫ್ ಆದ ಬನ್ನಾಡಿ ವಡ್ಡರ್ಸೆ ಯ ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಹಾಗೂ ಕ್ಲಬ್ ಅತ್ಯಂತ ಹಿರಿಯ ಸದಸ್ಯರಾದ ಲಯನ್ ವಸಂತ ವಿ ಶೆಟ್ಟಿ ಯವರನ್ನು ಗೌ| ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೋರವರು ಗೌರವಿಸಿದರು.
ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್,ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ರವಿರಾಜ್ ನಾಯಕ್ ಲಯನ್ಸ್ ಜಿಲ್ಲಾ ಜಿ.ಎಮ್.ಟಿ. ಚೀಫ್ ಕೋ ಆರ್ಡಿನೇಟರ್ ಲಯನ್ ಅರುಣ್ ಕುಮಾರ್ ಹೆಗ್ಡೆ
ಲಯನ್ಸ್ ಜಿಲ್ಲಾ ಪಿ.ಆರ್.ಓ. ಲಯನ್ ಸಿದ್ದರಾಜು ರೀಜನ್ VI ರ ರೀಜನ್ ಚಯರ್ ಪರ್ಸನ್ ಲಯನ್ ದೀನಪಾಲ್ ಶೆಟ್ಟಿ, ರೀಜನ್ VI ರ ರೀಜನ್ ಸೆಕ್ರೆಟರಿ ಲಯನ್ ಮೋಹನ್ ದಾಸ್ ಶೆಟ್ಟಿ, ಝೋನ್ II ರ ಝೋನ್ ಚಯರ್ ಪರ್ಸನ್ ಲಯನ್ ಶಂಕರ್ ಶೆಟ್ಟಿ ಬವಲಾಡಿ, ಝೋನ್ I ರ ಝೋನ್ ಚಯರ್ ಪರ್ಸನ್ ಲಯನ್ ರಜತ್ ಶೆಟ್ಟಿ,bಎಕ್ಸ್ಟೆನ್ಷನ್ ಚಯರ್ ಮ್ಯಾನ್ ಲಯನ್ ದಿನಕರ ಶೆಟ್ಟಿ ಎಮ್, ಶುಭಾಶಂಸನೆಗೈದರು.
ಮಾಜಿ ರೀಜನ್ ಚಯರ್ ಪರ್ಸನ್ ಲಯನ್ ಶೇಖರ ಶೆಟ್ಟಿ ಯವರು ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಗಮ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಇತರ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕುಟುಂಬ ಸದಸ್ಯರು ಹಾಗೂ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಹಾಜರಿದ್ದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಕೋಶಾಧಿಕಾರಿ ಲಯನ್ ವಸಂತ್ ವಿ. ಶೆಟ್ಟಿ ವಂದಿಸಿದರು.
ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರು ಸ್ವಾಗತಿಸಿ ಲಯನ್ಸ್ ಕ್ಲಬ್ ನ ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ಮುಂದಿನ ಅಧ್ಯಕ್ಷರಾದ ಲಯನ್ ಬಿ.ಬಿ.ಪ್ರವೀಣ್ ಹೆಗ್ಡೆ, ಕಾರ್ಯಕ್ರಮ ನಿರೂಪಿಸಿದರು.