ಡೈಲಿ ವಾರ್ತೆ: 01/Feb/2024
ಫೆ. 4 ರಂದು ಕರ್ನಾಟಕ ಮುಸ್ಲಿಂ ಜಮಾಅತ್ತ್ ಬ್ರಹ್ಮಾವರ ಝೋನ್ ಮಹಾಸಭೆ
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಆದೇಶದಂತೆ ಜಿಲ್ಲಾ ಸಮಿತಿಯ ನಿರ್ದೇಶನದಲ್ಲಿ ಉಡುಪಿ ಜಿಲ್ಲೆಯ ವಿವಿಧ ಝೋನ್ ಸಮಿತಿಗಳ ಮಹಾಸಭೆಗಳು ನಡೆಯುತ್ತಿದ್ದು ಕಾರ್ಕಳ ಮತ್ತು ಕಾಪು ಝೋನ್ ಸಮಿತಿಗಳ ಮಹಾಸಭೆ ಯಶಸ್ವಿಯಾಗಿ ನಡೆದಿದೆ. ಬ್ರಹ್ಮಾವರ ಝೋನ್ ಮಹಾಸಭೆ 2024 ರ ಪೆಬ್ರವರಿ 4 ರ ಆದಿತ್ಯವಾರ ಮದ್ಯಾಹ್ನ 3.30 ಕ್ಕೆ ಕುವ್ವತುಲ್ ಇಸ್ಲಾಂ ಜುಮಾ ಮಸೀದಿ ಸಾಸ್ತಾನ ಇದರ ಸಭಾಂಗಣದಲ್ಲಿ ಝೋನ್ ಸಮಿತಿಯ ಅಧ್ಯಕ್ಷರಾದ ಜೆ. ಮುಷ್ತಾಕ್ ಅಹ್ಮದ್ ಹೊನ್ನಾಳರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಝೋನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಆದಂ ಮಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ನಾಯಕರಾದ ಅಸ್ಸೈದ್ ಜಾಫರ್ ಅಸ್ಸಖಾಫ್ ತಂಗಳ್ ಕೊಟೇಶ್ವರ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಬಿಎಸ್ಎಫ್ ಮುಹಮ್ಮದ್ ರಫೀಕ್ ಕುಂದಾಪುರ, ಜಾಮಿಯ ಮಸೀದಿ ಸಾಸ್ತಾನ ಇದರ ಅಧ್ಯಕ್ಷರಾದ ಅಬ್ದುಲ್ ಹಮೀದ್, ಸುಬ್ಹಾನ್ ಅಹ್ಮದ್ ಹೊನ್ನಾಳ, ಮುಹಮ್ಮದ್ ಗೌಸ್ ಕಾರ್ಕಳ, ವೈಬಿಸಿ ಬಶೀರಲಿ ಮೂಳೂರ್ ಅಶ್ರಫ್ ಗರ್ಮಾ ತೊನ್ಸೆ ಹಾಗೂ ಇನ್ನಿತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಝೋನ್ ವ್ಯಾಪ್ತಿಯ ಕೋಟಾ, ಪಡುಕೆರೆ,ಕನ್ಯಾನ್ ಕೋಡಿ, ಪಾರಂಪಳ್ಳಿ,ಸಾಸ್ತಾನ,ಗುಂಡ್ಮೀ, ಸಾಲಿಗ್ರಾಮ, ಹಂಗಾರ್ ಕಟ್ಟೆ, ಉಪ್ಪಿನಕೋಟೆ,ಬ್ರಹ್ಮಾವರ, ಬಾರ್ಕೂರ್,ರಂಗನಕೆರೆ, ಮದುವನ,ಮಟಪಾಡಿ, ಕುಂಜಾಲ್,ಕೊಳಂಬೆ,ಭದ್ರಗಿರಿ, ಗಾಂಧಿ ನಗರ ಹೊನ್ನಾಳ ಯುನಿಟ್ ಗಳಿಂದ ಕನಿಷ್ಠ 10 ರಂತೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.