ಡೈಲಿ ವಾರ್ತೆ: 03/Feb/2024

ವರದಿ: ವಿದ್ಯಾಧರ ಮೊರಬಾ

ಪೂರ್ಣ ಪ್ರಜ್ಞಾದ ಜಗದೀಶ ಮಾಸ್ತರ ಇನ್ನಿಲ್ಲಾ

ಅಂಕೋಲಾ : ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ಕ್ರಾಂತಿಯನ್ನು ಬೆಳಗಿಸಿದ ಶಿಸ್ತಿನ ಸಿಪಾಯಿ ಪೂರ್ಣ ಪ್ರಜ್ಞಾ ಕರುಣಾ ವಿಜ್ಞಾನ ಮತ್ತು ವಾಣ ಜ್ಯ ಕಾಲೇಜಿನ ಸಂಸ್ಥಾಪಕ ಹಾಗೂ ಪ್ರಾಚಾರ್ಯ ಮತ್ತು ಅಂಕೋಲಾ ಪುರಸಭೆಯ ಸದಸ್ಯರಾದ (ಜಗದೀಶ ನರೇಂದ್ರ ನಾಯಕ) ಜಗದೀಶ ಮಾಸ್ತರ (72) ಶನಿವಾರ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಕುಮಟಾ ಮತ್ತು ಅಂಕೋಲಾ ತಾಲೂಕಿನ ಗಡಿಭಾಗದ ನಾಡುಮಾಸ್ಕೇರಿಯವರಾಗಿದ್ದು, ಜಗದೀಶ ನಾಯಕ ಅವರು ಸರ್ಕಾರಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿದ್ದರು. ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯಾರ್ಥಿ ಗಳಿಗೆ ಭವಿಷ್ಯ ರೂಪಿಸುವ ಸಲುವಾಗಿ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಬಡ ಜನರ ಹಾಗೂ ಹಿಂದುಳಿದ, ದಲಿತ ವರ್ಗದ ಅಭಿವೃದ್ಧಿಗಾಗಿ ಪೂರ್ಣ ಪ್ರಜ್ಞಾ ಪ್ರೌಢ ಶಾಲೆಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಿದರು. ನಂತರ ನಂತರ ಪೂರ್ಣ ಪ್ರಜ್ಞಾ ಕರುಣಾ ಮಹಾವಿದ್ಯಾ ಲಯ ಸ್ಥಾಪಿಸಿ, ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವಲ್ಲಿ ಶ್ರಮಿಸಿದರು. ಈ ಹಿಂದಿಯೂ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಡಳಿತ ನಡೆಸಿದ್ದರು. ಈಗ ಪಕ್ಷೇತರವಾಗಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪತ್ನಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ನಿಧನಕ್ಕೆ ತಾಲೂಕಿನ ಗಣ್ಯರು, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು ಮತ್ತು ನಿಕಟವರ್ತಿಗಳು ಸಂತಾಪ ಸೂಜಿಸಿದ್ದಾರೆ.

ಸಂತಾಪ ಸೂಚನೆ : ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಪ್ರಮುಖರಾದ ಭಾಸ್ಕರ್ ನಾವೆ೯ಕರ್, ಪ್ರಶಾಂತ ನಾಯಕ, ಗೋಪಾಲಕೃಷ್ಣ ನಾಯಕ, ರಾಮು ಕೆಂಚನ ಹಿರೇ ಗುತ್ತಿ, ಕೆ.ಆರ್.ನಾಯಕ, ಮಹೇಶ್ ನಾಯಕ್ ಹಿಚ್ಕಡ, ವಿನೋದ್ ನಾಯಕ,ದೇವಾನಂದ ಗಾಂವ್ಕರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ