ಡೈಲಿ ವಾರ್ತೆ: 06/Feb/2024
ಮಲ್ಪೆ : ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಿಂದ ದಲಿತ ಯುವಕನ ಮೇಲೆ ಹಲ್ಲೆ : ಮಹಿಳೆ ಸಹಿತ ನಾಲ್ವರ ಮೇಲೆ ಎಫ್ಐಆರ್
ಮಲ್ಪೆ: ಫೆ.06 : ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೇಲ್ ನಲ್ಲಿ ರವಿವಾರ ನಡೆದಿದೆ.
ಕರವೇ ಸದಸ್ಯರಾದ ಪ್ರಭಾಕರ, ಕುಶಾಲ್, ಜಯ, ಅಶ್ವಿನಿ ಎಂಬವರು ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಯುವಕನನ್ನು ಮೂಡುಬೆಳ್ಳೆ ನಿವಾಸಿ ಶಶಿಕುಮಾರ್ (34) ಎಂದು ಗುರುತಿಸಲಾಗಿದೆ.
ದಿನಾಂಕ. 04.02.2024 ರ ರವಿವಾರ ಸಂಜೆ 4 ಗಂಟೆಗೆ ಕಾರ್ತಿಕ್ ಎಸ್ಟೇಟ್ ಹೋಟೇಲ್ ನಲ್ಲಿ ಕರವೇ ಸಭೆಯನ್ನು ಕರವೇ ಸದಸ್ಯ ಪ್ರಭಾಕರ ಪೂಜಾರಿ ಕರೆದಿದ್ದು ಈ ನಡುವೆ ನಿಕಟ ಪೂರ್ವ ಅಧ್ಯಕ್ಷ ಅನ್ಸಾರ್ ಅಹಮದ್ ಪ್ರಭಾಕರ ರವರಲ್ಲಿ ಪ್ರಸ್ತುತ ಅಧ್ಯಕ್ಷರೇ ಇಲ್ಲದೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೇ ಹೇಗೆ ಮೀಟಿಂಗ್ ಎಂದು ಕೇಳಿದಾಗ ಅವರೊಳಗೆ ವಾದ-ವಿವಾದ ನಡೆದಿರುತ್ತದೆ.
ಈ ಸಂದರ್ಭದಲ್ಲಿ ಆರೋಪಿಗಳಾದ ಪ್ರಭಾಕರ, ಕುಶಾಲ್, ಜಯ, ಅಶ್ವಿನಿ ಎಂಬವರು ದಲಿತ ಯುವಕನಾದ ಶಶಿಕುಮಾರ್ ಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ಮಾತ್ರವಲ್ಲದೇ ಹಲ್ಲೆ ನಡೆಸಿರುತ್ತಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2024 ಕಲಂ: 323, 504 , 506 ಜೊತೆಗೆ 34 ಐಪಿಸಿ & 3(1)(r), 3(1)(s), 3(2)(v-a) SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.
ಕರವೇ ಪ್ರಭಾಕರ ಪೂಜಾರಿ ವಿರುದ್ಧ ಕಳೆದ 1 ತಿಂಗಳ ಹಿಂದೆ ದಲಿತ ಮಹಿಳೆಗೆ ಜೀವಬೆದರಿಕೆಯೊಡ್ದಿದ ಆರೋಪದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.