ಡೈಲಿ ವಾರ್ತೆ: 07/Feb/2024
ಹರಪನಹಳ್ಳಿಯನ್ನು ತಂಬಾಕು ಮುಕ್ತ ಮಾಡೋಣ : ವಕೀಲರ ಸಂಘದ ಅಧ್ಯಕ್ಷರಾದ ರಾಮನಗೌಡ ಪಾಟೀಲ್
ಹರಪನಹಳ್ಳಿ : (ವಿಜಯನಗರ ಜಿಲ್ಲೆ ) :- ತಂಬಾಕನ್ನು ಬಳಸದೆ ಇರುವುದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ ಆದರೆ ತಂಬಾಕನ್ನು ಬಳಸುವುದರಿಂದ ಕ್ಯಾನ್ಸರು ಕ್ಷಯರೋಗ ದಂತಕ್ಷಯ ಗರ್ಭಕೋಶದ ಕ್ಯಾನ್ಸರ್ ಇನ್ನು ಹಲವಾರು ಕಾಯಿಲೆಗಳು ಬರುತ್ತವೆ ಹಾಗಾಗಿ ತಂಬಾಕನ್ನು ತ್ಯಜಿಸಿ ನಮ್ಮ ಹರಪನಹಳ್ಳಿಯನ್ನು ತಂಬಾಕು ಮುಕ್ತ ಮಾಡೋಣ ಎಂದು ವಕೀಲರ ಸಂಘದ ಅಧ್ಯಕ್ಷರಾದ ರಾಮನಗೌಡ ಪಾಟೀಲ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ತಾಲೂಕು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ
ಹರಪನಹಳ್ಳಿ ಎಸ್ಸಿಎಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹರಪನಹಳ್ಳಿ ಹಾಗೂ ತಾಲೂಕು ಕಾನೂನು ಪ್ರಾಧಿಕಾರ ಹರಪನಹಳ್ಳಿ ಇವರ ಸಹಯೋಗದಲ್ಲಿ ಹರಪನಹಳ್ಳಿಯ ಐಬಿ ವೃತ್ತದಲ್ಲಿ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ತಂಬಾಕು ಮುಕ್ತ ಜೀವನಕ್ಕಾಗಿ ಜಿಲ್ಲಾಧ್ಯಂತ ಏಕಕಾಲದಲ್ಲಿ ಗುಲಾಬಿ ಆಂದೋಲನ ಜಾತ ಕಾರ್ಯಕ್ರಕ್ಕೆ ಅವರು ಚಾಲನೆಯನ್ನು ನೀಡಿ ಮಾತನಾಡಿದ ಅವರು
ಕೋಟ್ಪಾ. ಕಾಯ್ದೆ 2003ರ ಆಡಿಯಲ್ಲಿ ಇರುವಂತಹ ಸೆಕ್ಷನ್4 ಸೆಕ್ಷನ್5 ಸೆಕ್ಷನ್6, 7, 8, 9 ಸೆಕ್ಷನ್ ನಲ್ಲಿ ಬರುವ ಶಿಕ್ಷೆ ಮತ್ತು ದಂಡನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಹಾಲಸ್ವಾಮಿ ಮಾತನಾಡಿ ರೋಗಕ್ಕೆ ಹಾನಿಕಾರಕ ತಂಬಾಕು ಸೇವನೆಯಿಂದ ಶೇಕಡ 60ರಷ್ಟು ಕ್ಯಾನ್ಸರ್ ಬರುತ್ತದೆ ನಮ್ಮ ದೇಶದಲ್ಲಿ ಪ್ರತಿವರ್ಷ 13.92 ಲಕ್ಷ ಜನ ಹೊಸ ರೋಗಿಗಳು 8.51 ಲಕ್ಷ ಜನ ಮರಣವನ್ನು ಹೊಂದುತ್ತಾರೆ ಕರ್ನಾಟಕದಲ್ಲಿ 87.5 ಹೊಸ ರೋಗಿಗಳು ಹಾಗೂ 25.700 ಜನ ಮರಣವನ್ನು ಒಪ್ಪುತ್ತಾರೆ ಹಾಗಾಗಿ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಪ್ರತಿ ವರ್ಷ ಆರೋಗ್ಯ ತಪಾಷಣೆ ಮಾಡಿಸಿಕೊಳ್ಳುವುದು ಅವಶ್ಯಕ ಎಂದು ತಿಳಿಸಿದರು.
ಜೊತೆಗೆ 9ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕ್ಯಾನ್ಸರ್ ಲಸಿಕೆಯನ್ನು ಸರ್ಕಾರ ನೀಡಲು ಮುಂದಾಗಿದೆ ಎಂದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾಗೃತಿ ಜಾತವನ್ನು ಮಾಡುತ್ತಾ ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟಗಳ ಮಳೆಗೆ ಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರಿಗೆ ಗುಲಾಬಿ ಹೂವನ್ನು ಕೊಡುವುದರ ಮೂಲಕ ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವಂತೆ ಮನವಿ ಮಾಡಲಾಯಿತು.
ಈ ಜಾತ ಕಾರ್ಯಕ್ರಮದಲ್ಲಿ ಎಸ್ ಸಿ ಎಸ್ ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಶಂಕರಯ್ಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಡಿ.ನಿರ್ಮಲ ವಕೀಲರಾದಂತಹ ಮೃತ್ಯುಂಜಯ, ಫೀರ್
ಅಹ್ಮದ್ ಹಾಗೂ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್ ಗೌರಮ್ಮ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಿ ರುದ್ರ ಚಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭುವನೇಶ್ವರಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸುನಿತಾ ರೇಣುಕಾ ಶೃತಿ ದೀಪಿಕಾ ಜ್ಯೋತಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು , ಇತರರು ಉಪಸ್ಥಿತರಿದ್ದರು.