ಡೈಲಿ ವಾರ್ತೆ: 11/Feb/2024
ಬಾರಕೂರು ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ – ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಮಕ್ಕಳನ್ನೇ ಆಸ್ತಿ ಯನ್ನಾಗಿಸಿ ಕೊಳ್ಳಿ- ಬಿ. ಸೀತಾರಾಮ್ ಶೆಟ್ಟಿ
ಬ್ರಹ್ಮಾವರ: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರಕೂರುನಲ್ಲಿ ಶಿಕ್ಷಕ – ರಕ್ಷಕ ಸಭೆ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಯ ಉಪಾಧ್ಯಕ್ಷರಾದ ಬಿ. ಸೀತಾರಾಮ್ ಶೆಟ್ಟಿ ಮಾತನಾಡಿ “ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಮಕ್ಕಳನ್ನು ಆಸ್ತಿ ಯನ್ನಾಗಿಸಿ “ಎಂದು ಪೋಷಕರಿಗೆ ಕಿವಿ ಮಾತುಗಳನ್ನಾಡಿದರು.
ಈ ಶಿಕ್ಷಕ – ರಕ್ಷಕ ಸಭೆಯ ಅಧ್ಯಕ್ಷತೆಯನ್ನು ಎಚ್. ವಿಠ್ಠಲ್ ಶೆಟ್ಟಿ ಶೇಡಿಕೊಡ್ಲು, ಉಪಾಧ್ಯಕ್ಷರು ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ರವರು ವಹಿಸಿ ಶಿಕ್ಷಕ, ವಿದ್ಯಾರ್ಥಿ ಮತ್ತು ಪೋಷಕರ ಬಾಂಧವ್ಯ ಉತ್ತಮ ವಾಗಿರ ಬೇಕು ಎಂದು ಹೇಳಿದರು.
“ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಯ್ಕೆ ಸ್ವಾತಂತ್ರ್ಯ ಕೊಡಿ ” ಎಂದು ಅಶೋಕ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ರವರು ತಮ್ಮ ಮಾತುಗಳನ್ನಾಡಿದರು.
“ಸೂಕ್ತ ಪ್ರತಿಭೆ ಗಳನ್ನು ಗುರುತಿಸುವ ಕೆಲಸ ಆಗಬೇಕು” ಎಂದು ಶ್ರೀ ಆರ್ಚಿ ಬಾಲ್ಡ್ ಫುಟಾರ್ಡೂ, ಕೋ-ಆರ್ಡಿ ನೆಟರ್ ಬಾರಕೂರು ಎಜುಕೇಷನಲ್ ಸೊಸೈಟಿ (ರಿ ) ಬಾರಕೂರು ರವರು ಸಲಹೆ ನೀಡಿದರು .
“ಎಸ್. ವಿ. ವಿ. ಎನ್. ಶಾಲೆ ಗೆ 20 ರ ಸಂಭ್ರಮ ” ಮತ್ತು ಶಾಲೆಯಲ್ಲಿರುವ ಶೈಕ್ಷಣಿಕವಾಗಿ ಸಿಗುವ ಸೌಲಭ್ಯ ದ ಕುರಿತು ಶಾಲೆಯ ಸಂಚಾಲಕರಾದ ರಾಜ ರಾಮ್ ಶೆಟ್ಟಿ ರವರು ಮಾಹಿತಿ ನೀಡಿದರು .
ಶಾಲೆಯಲ್ಲಿ ವಿದ್ಯಾರ್ಥಿ ಗಳು, ಮತ್ತು ಶಿಕ್ಷಕರ ಸಾಧನೆ ಗಳನ್ನು ಮಾಡಿದರೆ ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ಹೀಗೆ ಮುಂದುವರಿಯಲಿ ಎಂದು ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜ ಗೋಪಾಲ್ ನಂಬಿಯಾರ್ ರವರು ತಮ್ಮ ಅಭಿಪ್ರಾಯ ವನ್ನು ವ್ಯಕ್ತ ಪಡಿಸಿದರು. 10ನೇ ತರಗತಿಯ ಪೋಷಕರಿಗೆ ವಿಶೇಷವಾಗಿ ಆಡಳಿತ ಮಂಡಳಿ ಯೊಂದಿಗೆ ಸಭೆ ನಡೆಸಿ ಉತ್ತಮ ಫಲಿತಾಂಶ ಬರಲು ಕೆಲವು ಸಲಹೆ ಸೂಚನೆ ಗಳ ಬಗ್ಗೆ ಚರ್ಚಿಸಲಾಯಿತು.
ಶಾಲೆ ಯ ಮುಖ್ಯಸ್ಥ ರಾದ ಶ್ರೀಮತಿ ಲಿಖಿತಾ ಕೊಠಾರಿ ರವರು ಪ್ರಾಸ್ತಾವಿಕ ಮಾತು ಗಳನ್ನಾಡಿದರು , ಶಿಕ್ಷಕಿ ಶ್ರೀಮತಿ ಸುಜಾತಾ ಎಲ್. ರೈ ಮತ್ತು ದೈಹಿಕ ಶಿಕ್ಷಕರಾದ ಸುರೇಶ ಶೆಟ್ಟಿ ರವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಅಪರ್ಣ ಭಟ್ ಪ್ರಾರ್ಥಿಸಿದರು. ಶಿಕ್ಷಕರಾದ ಪೂರ್ಣೇಶ್ ಸರ್ ವಂದಿಸಿದರು ಮತ್ತು ನಾಗೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ,ಶಿಕ್ಷಕೇತರರು ಸಹಕರಿಸಿದರು.