



ಡೈಲಿ ವಾರ್ತೆ: 16/Feb/2024


ರಾಜ್ಯ ಬಜೆಟ್ – 2024 ಪ್ರತಿಕ್ರಿಯೆ ಸಮತೋಲಿತ ಬಜೆಟ್: ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ
ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ, ಶಿಕ್ಷಣ, ಕ್ರೀಡೆ, ವಸತಿ, ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳು, ಮೀನುಗಾರಿಕೆ ಹೀಗೆ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅತ್ಯಂತ ಸಮತೋಲಿತವಾದ ಬಜೆಟ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ನೀಡಿದ್ದಾರೆ.
ಕೇಂದ್ರ ಸರಕಾರದ ನೀರಸ ಬಜೆಟ್‌ನಿಂದ ಭ್ರಮನಿರಸನಗೊಂಡಿರುವ ರಾಜ್ಯದ ಜನತೆಗೆ ಸಾಂತ್ವನ ನೀಡಿದ್ದಾರೆ. ಪ್ರವಾಸಿ ತಾಣಗಳ ಅಭಿವೃದ್ಧಿ, ಸೂರಿಲ್ಲದವರಿಗೆ 3 ಲಕ್ಷ ಮನೆ ನಿರ್ಮಾಣದ ಗುರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆಯಲ್ಲಿ ಹೆಚ್ಚಳ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸರಕಾರಿ ಶಾಲೆಗಳ ಅಭಿವೃದ್ಧಿ, ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಸೇವೆ, ಪುಡ್ ಪಾರ್ಕ್ ನಿರ್ಮಾಣ, ಸೈನ್ಸ್ ಸಿಟಿ ನಿರ್ಮಾಣ, ಶ್ರೀರಾಮ ದೇವಾಲಯಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗಿದೆ.
ಆದರೆ ಕಾರ್ಮಿಕವರ್ಗದ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನದಲ್ಲಿ ಸ್ವಲ್ಪವೂ ಏರಿಕೆ ಮಾಡದೇ ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಅಭಿಪ್ರಾಯ ಪಟ್ಟರು.
ಕೆ.ರಾಘವೇಂದ್ರ ನಾಯರಿ
ಕಾರ್ಮಿಕ ಮುಖಂಡ
ಮೊ: 9844314543
ಮೈಲ್: [email protected]