ಡೈಲಿ ವಾರ್ತೆ: 19/Feb/2024
ಕುಂದಾಪುರ:ವಿಠಲವಾಡಿ ಫ್ರೆಂಡ್ಸ್ ನ ರಜತ ಪರ್ವ ವಾರ್ಷಿಕೋತ್ಸವ – ಪರೋಪಕಾರವೇ ಧರ್ಮ : ವೇದಮೂರ್ತಿ ಲೋಕೇಶ್ ಅಡಿಗ
ಕುಂದಾಪುರ: ಉಪಕಾರ ಮಾಡಿದವರನ್ನು ನೆನಪಿಸಿಕೊಳ್ಳುವುದೇ ನಿಜವಾದ ಧರ್ಮ. ಉಪಕಾರ ಮಾಡಿದವರಿಗೆ ಅವಮಾನ ಮಾಡುವುದು, ಅಪಚಾರವೆಸಗುವುದು ಅಧರ್ಮ ಎನಿಸುತ್ತದೆ ಎಂದು ವೇದಮೂರ್ತಿ ಲೋಕೇಶ್ ಅಡಿಗ ಹೇಳಿದರು.
ಕುಂದಾಪುರದ ವಿಠಲವಾಡಿ ಫ್ರೆಂಡ್ಸ್ ನ ರಜತ ಪರ್ವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭ ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗೇಶ್, ಗ್ರಾಮದ ಹಿರಿಯ ಜ್ಯೋತಿಷಿ ಮಾಧವ ನಾವಡ ಮತ್ತು ಉದ್ಯಮಿಗಳಾದ ಕೆ ಆರ್ ನಾಯಕ್ ಅವರನ್ನು ವಿಠಲವಾರಿ ಫ್ರೆಂಡ್ ರಜತ ಪರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ನಾಗರಾಜ್ ವಿಠಲವಾಡಿ, ವಿಶೇಷ ಚೇತನ ಕ್ರೀಡಾ ಪ್ರತಿಭೆ ಸೃಜನಾ ಎಸ್ ಪಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲವಾಡಿ ಫ್ರೆಂಡ್ಸ್ ನ ಅಧ್ಯಕ್ಷ ಸಂತೋಷ ವಿಠಲವಾಡಿ ವಹಿಸಿಕೊಂಡರು, ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಿತ್ತಿನ್ ವಿಠಲವಾಡಿ, ಗೌರವ ಅಧ್ಯಕ್ಷ ಸುರೇಶ ,ಖಜಾಂಜಿ ದಿವಾಕರ ,ಕೋಶಾಧಿಕಾರಿ ರಾಘು ವಿಠಲವಾಡಿ, ಹಾಗೂ ಸರ್ವಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.