ಡೈಲಿ ವಾರ್ತೆ: 20/Feb/2024
ವರದಿ: ಶಿವಾನಂದಸ್ವಾಮಿ ಆರ್. ದೊರೆ.
ನೊಂದು ಬಂದವರಿಗೆ ನ್ಯಾಯುತವಾಗಿ ನೇರವು ನೀಡುವುದು ನ್ಯಾಯಧಿಶರ ಕರ್ತವ್ಯ ಹಿರೇಮಠ.
ಯಾದಗಿರಿ: ಫೆ.20.ಜನಸಾಮಾನ್ಯರಿಗೆ ತೊಂದರೆಯಾದಾಗ, ಅನ್ಯಾಯಕ್ಕೊಳಾಗಿ ನೊಂದು ಬಂದವರಿಗೆ ನ್ಯಾಯುತವಾಗಿ ನೇರವು ನೀಡಬೇಕೆಂದು ವಿಶೇಷ ಉಪನ್ಯಾಸಕರಾಗಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು.
ಸುರಪುರ ತಾಲೂಕಿನ ದೇರವಗೋನಾಲ ಗ್ರಾಮದ ಶ್ರೀ ಅಯ್ಯಾಳಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ತಾಲೂಕು ಕಾನೂನು ಸೇವಾ ಸಮಿತಿ ಸುರಪುರ ಹಾಗೂ ನ್ಯಾಯವಾದಿಗಳ ಸಂಘ ಇಂದು ಸುರಪುರ ತಾಲೂಕಿನ ದೇವರ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸುರಪುರ ಹಾಗೂ ನ್ಯಾಯವಾದಿಗಳ ಸಂಘ, ಸುರಪುರ ಮತ್ತು ತಾಲೂಕು ಪಂಚಾಯಿತಿ ಇಲಾಖೆ, ತಾಲೂಕಿನ ದೇವರಗೋನಾಲ ಗ್ರಾಮ ಪಂಚಾಯಿತಿ ಸಂಯುಕ್ತಾಕ್ಷರದಲ್ಲಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು.
ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಕಾನೂನಿನ ಅನೇಕ ವಿಚಾರಗಳನ್ನು ಸವಿಸ್ತಾರವಾಗಿ ಹೇಳಿದರು
ನ್ಯಾಯವಾಧಿಗಳ ಸಂಘದ ಅಧ್ಯಕ್ಷರಾದ ರಮಾನಂದ ಕವಲಿ ಸಂಘದ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂ. ಅಧ್ಯಕ್ಷರು, ಪ್ರೌಢಶಾಲೆ ಮಕ್ಕಳು ಪೂರ್ಣಿ ಮುಖಂಡರಾದ ದೇವೇಂದ್ರಪ್ಪ ಚಿಕ್ಕನಹಳ್ಳಿ ವೆಂಕಟೇಶ್ ಬೇಟೆಗರ ಸಣ್ಣ ದೇಸಾಯಿ ಬಸವರಾಜ ಕೋತಿ ಗುಡ್ಡ. ನಾನೇಗೌಡ ಬಾಡ, ಮಾರ್ಥಂಡಪ್ಪ ದೊರೆ, ಬಸವಂತಪುರ ಶಿಕ್ಷಕರು ಊರಿನ ಪ್ರಮುಖರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಸೇರಿದಂತೆ ದೇವೇಂದ್ರಪ್ಪ ಚಿಕ್ಕನಹಳ್ಳಿ ವೆಂಕಟೇಶ ಬೇಟೆಗಾರ, ಸಣ್ಣ ದೇಸಾಯಿ, ಬಸವರಾಜ ಕೋತಿಗುಡ್ಡ, ನಾನೇಗೌಡ ಬಾಡ, ಮಾರ್ಥಂಡಪ್ಪ ದೊರೆ, ಬಸವಂತರಾಯ ಶಿಕ್ಷಕರು ಊರಿನ ಮುಖಂಡರು, ಹಿರಿಯರು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಭಾಗಿಯಾಗಿದ್ದರು.
ಶಿಕ್ಷಕರಾದ ಭೀಮರಾಯ ಮಲ್ಲಾಪುರ್ ನಿರೂಪಿಸಿದರು.