ಡೈಲಿ ವಾರ್ತೆ: 25/Feb/2024
ಕೋಟ: ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ರಥೋತ್ಸವ ಸಂಪನ್ನ
ಕೋಟ:ಪುರಾಣ ಪ್ರಸಿದ್ಧ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ಶ್ರೀ ದೇಗುಲದಿಂದ ಕೋಟ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟದ ಅಮೃತೇಶ್ವರಿ ದೇಗುಲದ ವರೆಗೆ ತೇರು ಸಂಚರಿಸಿ ಮರಳಿ ಶ್ರೀ ದೇಗುಲವನ್ನು ತಲುಪಿತು.
ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಸದಸ್ಯರ ನೆರವಿನೊಂದಿಗೆ ಸುಡುಮದ್ದು ಪ್ರದರ್ಶನ,ಮೆರವಣಗೆಯಲ್ಲಿ ವಿಶೇಷವಾದ ಸ್ಥಬ್ಧಚಿತ್ರಗಳು,ಕೀಲು ಕುದುರೆ,ಡೊಳ್ಳು ಕುಣ ತ,ಚೆಂಡೆವಾದನ,ಸಂಚಾರಿ ಆರ್ಕೆಸ್ಟ್ರಾ, ವಿವಿಧ ಭಜನಾ ತಂಡದಿಂದ ಕುಣ ತ ಭಜನೆ ಗಮನ ಸೆಳೆಯಿತು.
ಅಪರಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿ ಅನ್ನಪ್ರಸಾದ ಸ್ವೀಕರಿಸಿದರು.
ಪೂರ್ವಾಹ್ನ ಶ್ರೀ ದೇಗುಲದಲ್ಲಿ ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ, ರುದ್ರಾಭಿಷೇಕ ವಿವಿಧ ರೀತಿಯ ಪೂಜಾ ಕಾರ್ಯಗಳು ವೇ.ಮೂ.ರಾಜೇಂದ್ರ ಅಡಿಗರ ನೇತೃತ್ವದಲ್ಲಿ ನಡೆಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಗಣೇಶ್ ಭಟ್,ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ಜಿ.ಎಸ್ ಆನಂದ್ ದೇವಾಡಿಗ,ಸಮಿತಿ ಪ್ರಮುಖರಾದ ಚಂದ್ರ ದೇವಾಡಿಗ ಬೆಂಗಳೂರು,ಅಜಿತ್ ದೇವಾಡಿಗ,ಚಂದ್ರ ದೇವಾಡಿಗ,ರಾಜೇಶ್ ದೇವಾಡಿಗ,ಅರ್ಚಕರಾದ ಸದಾಶಿವ ಅಡಿಗ,ತೀರ್ಥೇಶ್ ಭಟ್,ಅನಂತಮೂರ್ತಿ ಭಟ್ ಮತ್ತಿತರರು ಇದ್ದರು.