ಡೈಲಿ ವಾರ್ತೆ: 24/Feb/2024

ಅಡರಕಟ್ಟಿ ಸ.ಮಾ.ಪ್ರಾ. ಶಾಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ ಯಿಂದ ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆ

ಲಕ್ಷ್ಮೇಶ್ವರ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ. ತಾಲೂಕು// ಲಕ್ಷ್ಮೇಶ್ವರ ಜಿಲ್ಲಾ// ಗದಗ ಶಾಲೆಯಲ್ಲಿ
“ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ” ಲಕ್ಷ್ಮೇಶ್ವರ ಘಟಕದಿಂದ ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆಯನ್ನು ದಿನಾಂಕ: 23 /ಫೆಬ್ರುವರಿ/ 2024ರಂದು ಆಚರಿಸಲಾಯಿತು.

ಅಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ /ಅಣಕು ಪ್ರದರ್ಶನ ಶಾಲಾ ಹಂತದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪ್ರಥಮ ಹಂತದಲ್ಲಿ ಶಾಲೆಯ ಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಅಗ್ನಿ ಅನಾಹುತ ತಡೆಗಟ್ಟುವ ಕುರಿತು ಶ್ರೀಯುತ ಎಂ ಎಚ್ ಕಡ್ಡಿಪೂಜಾರ ಅಗ್ನಿಶಾಮಕರು ತಿಳಿಸಿದರು. ಅಗ್ನಿ ಅನಾಹುತದಲ್ಲಿ ಮಡಿದ ಹುತಾತ್ಮರಿಗೆ ಹಾಗೂ ಸಾರ್ವಜನಿಕರ ಬಗ್ಗೆ, ಎರಡು ನಿಮಿಷದ ಮೌನಚರಣೆಯನ್ನು ಶ್ರೀಯುತ ಎಸ್ ವೈ ಪಾಟೀಲ ಠಾಣಾಧಿಕಾರಿಗಳು ಅಗ್ನಿಶಾಮಕ ಇಲಾಖೆ ಇವರು ನಿರ್ವಹಿಸಿಕೊಟ್ಟರು. ಇವರು ಮಾತನಾಡುತ್ತ ಪ್ರಾಥಮಿಕ ಶಿಕ್ಷಣ ಜೀವನ ಕೌಶಲದ ಬುನಾದಿಯಾಗಿದ್ದು, ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಶಿಕ್ಷಣ ಜೀವನದಲ್ಲಿ ಅನ್ವಯಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಶ್ರೀ ಕುಮಾರಣ್ಣ ಚಕ್ರಸಾಲಿಯವರು ಎಸ್ ಡಿ ಎಂ ಸಿ ಸದಸ್ಯರು, ಮಾತನಾಡುತ್ತಾ ಅಗ್ನಿ ಅನಾಹುತಗಳ ಹಾಗೂ ತುರ್ತು ಸಂದರ್ಭದಲ್ಲಿ ತಕ್ಷಣ ಪರಿಹಾರವನ್ನು ಕಂಡುಕೊಳ್ಳುವುದರ ಬಗ್ಗೆ ಈ ವೇದಿಕೆಯು ಶಾಲಾ ಮಕ್ಕಳಿಗೆ ನೆರವಾಗಲಿದೆ ಎಂದು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು.

ದ್ವಿತೀಯ ಹಂತದಲ್ಲಿ ಶಾಲೆಯ ಎಲ್ಲಾ ಮಕ್ಕಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಶಾಲಾ ಆವರಣದಲ್ಲಿ ಅಗ್ನಿ ಅನಾಹುತಗಳು ಹಾಗೂ ಅದನ್ನು ತಡೆಗಟ್ಟುವ ಕುರಿತು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ /ಅಣಕು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಲಕ್ಷ್ಮೇಶ್ವರ ಘಟಕದ ಸಿಬ್ಬಂದಿ ವರ್ಗ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಎಸ್ಡಿಎಂಸಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅತಿಥಿಯರನ್ನು ಶ್ರೀಮತಿ ಎಸ್. ಹೆಚ್. ಉಮಚಗಿ ಪ್ರಧಾನ ಗುರುಮಾತೆಯರು ಸ್ವಾಗತಿಸಿದರು, ಶ್ರೀ ಎಸ್ ಕೆ ಅಮ್ಮಿನಭಾವಿಯವರು ವಂದಿಸಿದರು. ಶ್ರೀ ಡಿ.ಡಿ ಲಮಾಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.