ಡೈಲಿ ವಾರ್ತೆ: 01/Mar/2024

ವರದಿ: ವಿದ್ಯಾಧರ ಮೊರಬಾ

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ : ಕೇಣಿ ಪ್ರೌಢ ಶಾಲೆಗೆ ದ್ವಿತೀಯ ಬಹುಮಾನ

ಅಂಕೋಲಾ : ಕಾರವಾರ ಜಿಪಂ.ನಲ್ಲಿ ಆವರಣದಲ್ಲಿ ಫೆ.29 ಗುರುವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ ವಿಕಸಿತ ಭಾರತಕ್ಕೆ ಸ್ಥಳೀಯ ತಂತ್ರ ಜ್ಞಾನಗಳ ಎಂಬ ವಿಷಯದ ಮೇಲೆ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಅಂಕೋಲಾದ ಕೇಣಿ ಸರ್ಕಾರಿ ಪ್ರೌಢ ಶಾಲೆ ದ್ವಿತೀಯ ಬಹುಮಾನ ಪಡೆದಿದೆ.

ರಾಜ್ಯ ಪ್ರಶಸ್ತಿ ಪುರಸ್ಕøತ ವಿಜ್ಞಾನ ಶಿಕ್ಷಕ ಸುಧೀರ ನಾಯಕ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಶ್ರೇಯಾ ಹರಿಕಾಂತ ಮತ್ತು ಜನ್ಮಿತಾ ಹರಿಕಾಂತ ಇವರು ಬಹೂಉಪಯೋಗಿ ಕೃಷಿ ಉಪಕರಣ, ಸೋಲಾರ್ ಛಾಲಿತ ಆಯ್ಲ ಕ್ಲಿನಿಂಗ್ ಬೋಟ, ಬಹುರೂಪಿ ದರ್ಶಕ, ವೃದ್ದರಿಗಾಗಿ ಟೊಯ್ಲೆಟ್ ಕ್ಲಿನಿಂಗ್ ಉಪಕರಣ, ತೇಲುವ ಸೋಲಾರ್ ಪಾರ್ಕಗಳು ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರದರ್ಶನ ನಡೆಸಿ ದ್ವಿತೀಯ ಬಹುಮಾನ ಪಡೆದರು.

ಉ.ಕ.ಜಿಪಂ.ಮುಖ್ಯಕಾರ್ಯ ನಿರ್ವಹಣಾಧಿಕಾರಿ ಈಶ್ವರ್ ಕಾಂದೂ, ಜಿಪಂ.ಪ್ರಭಾರ ಉಪ ಕಾರ್ಯದರ್ಶಿ ಎನ್.ಜಿ.ನಾಯಕ, ನಿವೃತ್ತ ಪ್ರಾಧ್ಯಾಪಕ ವಿ.ಎನ್.ನಾಯಕ, ವಿಜ್ಞಾನ ವಿಭಾಗದ ತಾಂತ್ರಿಕ ಅಧಿಕಾರಿ ಅನಿಲ ನಾಯ್ಕ, ಕೇಣಿ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಸುದೀರ ನಾಯಕ ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ಪ್ರೌಢ ಶಾಲೆಯ ಮುಖ್ಯೋಧ್ಯಾಪಕ ಚಂದ್ರಕಾಂತ ಗಾಂವಕರ, ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ಬಂಟ ಮೆಚ್ಚುಗೆ ವ್ಯಕ್ತಪಡಿಸಿದರು.