ಡೈಲಿ ವಾರ್ತೆ: 29/Mar/2024

ಕಲ್ಲಡ್ಕ : ಸಮಸ್ತ ಪಬ್ಲಿಕ್ ಪರೀಕ್ಷೆ , ಅಬ್ದುಲ್ ಅಝೀಂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ.

ಬಂಟ್ವಾಳ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24 ನೇ ಸಾಲಿನ 5 ನೇ ತರಗತಿ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕಲ್ಲಡ್ಕ ಮುನೀರುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ಅಬ್ದುಲ್ ಅಝೀಂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾನೆ.

   ಚಿಕ್ಕಮಗಳೂರು ನಿವಾಸಿ ಅಬ್ದುಲ್ ಶಕೂರ್ ಹಾಗೂ ಫಮೀನಾ  ದಂಪತಿಗಳ ಪುತ್ರನಾದ ಈತ 432 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾನೆ.