ಡೈಲಿ ವಾರ್ತೆ: 29/Mar/2024

ಬಿಜೆಪಿ-ಜೆಡಿಎಸ್‌ಗೆ ಶಾಕ್: ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ.ಎನ್. ಮಂಜುನಾಥ್ ಒಂದೇ ಹೆಸರಿನ ಇಬ್ಬರು ಸ್ಪರ್ಧೆ!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ವೈದ್ಯ, ಡಾ. ಸಿ.ಎನ್ ಮಂಜುನಾಥ್ ಕಣಕ್ಕಿಳಿಯಲು ಅಣಿಯಾಗಿದ್ದು, ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ದ ಪ್ರಭಲ ಪೈಪೊಟಿ ನೀಡಲು ಸಜ್ಜಾಗಿದ್ದಾರೆ ಮೂಲತಃ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಚೊಳೇನಹಳ್ಳಿ ಗ್ರಾಮದ ಡಾ.ಸಿ.ಎನ್. ಮಂಜುನಾಥ್ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರ ತಾಲ್ಲೂಕಿನವರೇ ಆದ ಅದೇ ಅದೇ ಹೆಸರಿನ ವ್ಯಕ್ತಿಯೊಬ್ಬರು ಕಣಕ್ಕಿಳಿಯೊದಾಗಿ ಘೋಷಣೆ ಮಾಡಿದ್ದಾರೆ. ಅಂದರೆ ಮತ್ತೊಬ್ಬ ಡಾ.ಸಿ.ಎನ್. ಮಂಜುನಾಥ್ ಎಂಬವವರು ಚುನಾವಣಾ‌ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಸ್ಪರ್ಧೆ ಒಡ್ಡಲು ಅದೇ ಹೆಸರಿನ ಗೌರವ ಡಾಕ್ಟರೇಟ್ ಮೂಲಕ ತಮ್ಮ ಹೆಸರಿನ ಮುಂದೆ ಡಾಕ್ಟರ್ ಹೊಂದಿರುವ ಡಾ.ಸಿ.ಎನ್.ಮಂಜುನಾಥ್ ಎಂಬುವವರು ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿರೊದಾಗಿ ಘೋಷಣೆ ಮಾಡಿದ್ದು ತೀವೃ ಕುತೂಹಲ ಮೂಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಒಂದೇ ಹೆಸರು ಹೊಂದಿರುವ ಇಬ್ಬರು ಮಂಜುನಾಥ್ ಅವರುಗಳ ತಂದೆಯ ಹೆಸರೂ ಒಂದೇ ಆಗಿದ್ದು, ಒಂದೇ ಜಿಲ್ಲೆ, ಒಂದೇ ತಾಲ್ಲೂಕಿನವರಾಗಿರೋದು ಕೂಡ ಪರಿಣಾಮ ಬೀರಬಹುದೇ ಎನ್ನೋ ಚರ್ಚೆ ಹುಟ್ಟು ಹಾಕಿದೆ. ಇಬ್ಬರಲ್ಲಿ ಒಬ್ಬರು ವೃತ್ತಿಯಿಂದ ವೈದ್ಯರು, ಮತ್ತೊಬ್ಬರು ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದಿರುವವರು ಎಂಬುದಷ್ಟೇ‌ ವ್ಯತ್ಯಾಸವಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದಲಿತ ಮತಗಳೇ ನಿರ್ಣಾಯಕವಾಗಿವೆ. ಏ.2 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.