



ಡೈಲಿ ವಾರ್ತೆ: 06/April/2024


ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆಯಾಗಿ ಪ್ರಮೀಳ ಮಾಣೂರು( ಸಾಯಿಪ್ರಿಯ) ಆಯ್ಕೆ
ಬಂಟ್ವಾಳ : ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆಯಾಗಿ ಪ್ರಮೀಳ ಮಾಣೂರು ( ಸಾಯಿಪ್ರಿಯ) ಆಯ್ಕೆಯಾಗಿದ್ದಾರೆ.
ಶ್ರೀ ಸಾಯಿ ಶಕ್ತಿ ಚಾರೀಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಬಂಟ್ವಾಳದ ಸಂಸ್ಥಾಪಕಿಯಾಗಿರುವ ಇವರು ಹಲವಾರು ಜಾನಪದ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಉಪಾಧ್ಯಕ್ಷರುಗಳಾಗಿ ಲಕ್ಷ್ಮೀ , ಪ್ರತಿಭಾ ಪಿ.ಶೆಟ್ಟಿ ಮತ್ತು ಕೃಷ್ಣ ಕುಲಾಲ್ ನರಿಕೊಂಬು,
ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಮೆಲ್ಕಾರ್ ಜತೆ ಕಾರ್ಯದರ್ಶಿಯಾಗಿ ಯಶವಂತ ಶೆಟ್ಟಿ ತುಂಬೆ, ಕೋಶಾಧಿಕಾರಿಯಾಗಿ ಬಬಿತ ಎಸ್.ಎಮ್, ಗೌರವ ಸಲಹೆಗಾರರಾಗಿ ಸದಾಶಿವ ಡಿ.ತುಂಬೆ, ರೋಶನ್ ರೈ, ಸುಧಾಕರ ತುಂಬೆ, ಅನಿಲ್ ಪಂಡಿತ್, ಗೋಪಾಲ ಅಂಚನ್ , ಸಂಚಾಲಕರಾಗಿ ಮನೋಜ್ ಕನಪಾಡಿ ಮತ್ತು ಪ್ರಶಾಂತ್ ಕನಪಾಡಿ , ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಹಾಸ ಕಡೆಗೋಳಿ, ರಾಜೇಶ್ ಆಚಾರ್ಯ, ದಿನೇಶ್ ಅಮೀನ್, ಸಾಂಸ್ಕ್ರತಿಕ ಕಾರ್ಯದರ್ಶಿಗಳಾಗಿ ಎಚ್ಕೆ. ನಯನಾಡು, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಸಾದ್ ಬಂಟ್ವಾಳ ಆಯ್ಕೆಯಾಗಿದ್ದಾರೆ.