



ಡೈಲಿ ವಾರ್ತೆ: 07/April/2024


ಮಕ್ಕಾ ಮದೀನಾದಲ್ಲಿ
ಉತ್ತರ ಕನ್ನಡ ಮೂಲದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತ್ಯು!
ಕಾರವಾರ: ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಾ.26ರಂದು ರಾತ್ರಿ ಮಕ್ಕಾ ಮದೀನಾಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದೀನಾ ಸಮೀಪ ವಿದೇಶದಲ್ಲಿ ಅಪಾಘಾತ ಸಂಭವಿಸಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಮೂವರು ದುರ್ಮರಣ ಹೊಂದಿದ್ದಾರೆ.
ಮೃತರು ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಅಣ್ಣನ ಮಗ ಆಯಾನ್ ರೋಣ ಎಂದು ಗುರುತಿಸಲಾಗಿದೆ.
ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.