ಡೈಲಿ ವಾರ್ತೆ: 22/April/2024

ಎರಡು ಕಾರುಗಳ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – ಯುವತಿಯೋರ್ವಳು ಸಜೀವ ದಹನ!

ಬೆಂಗಳೂರು: ಓಮ್ನಿ ಕಾರಿಗೆ ಬಲೆನೋ ಕಾರು ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಒಂದೇ ಕುಟುಂಬದ 8 ಜನರಿದ್ದ ಓಮ್ನಿ‌ಕಾರು ಪಲ್ಟಿಹೊಡೆದು ಬೆಂಕಿಗಾಹುತಿಯಾಗಿ ಯುವತಿಯೋರ್ವಳು ಸಜೀವ ದಹನವಾದ ಘಟನೆ ತುಮಕೂರು ಹೈವೆಯ ಮಾದಾವರ ಟೋಲ್ ಬಳಿ ರಾತ್ರಿ  ನಡೆದಿದೆ.
ಓಮ್ನಿ ಕಾರಿನಲ್ಲಿ ಒಂದೇ ಕುಟುಂಬದ 8 ಮಂದಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಖುಷಿಯಿಂದ ಮನೆಗೆ ವಾಪಸು ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಏಳು ಜನಕ್ಕೆ ಸುಟ್ಟ ಗಾಯಗಳಾಗಿದ್ರೇ 15 ವರ್ಷದ ಹುಡುಗಿಯೊಬ್ಬಳು ಸಜೀವ ದಹನವಾಗಿದ್ದಾಳೆ.

ಮೃತಪಟ್ಟ ಯುವತಿ ದಿವ್ಯಾ ಎಂದು ತಿಳಿದು ಬಂದಿದೆ. ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಾಳುಗಳಾಗಿದ್ದಾರೆ. ಇವರಲ್ಲಿ ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ.
ಮಾದಾವರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳುಗಳೆಲ್ಲರೂ ಗುಜರಾತಿ ಮೂಲದ ಕುಟುಂಬದವರು  ಎಂದು ತಿಳಿದು ಬಂದಿದೆ.