ಡೈಲಿ ವಾರ್ತೆ: 23/ಮೇ /2024

ಕೋಟ: ಜ್ಞಾನಚೇತನ ಕಂಪ್ಯೂಟರ್‌ ಅಕಾಡೆಮಿಯಲ್ಲಿ ಹದಿನೈದು ದಿನಗಳ ಕೌಶಲ್ಯಾಧಾರಿತ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ:ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು,  ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ (ಸಿಡಾಕ್), ಧಾರವಾಡ,ಇವರ ಸಹಯೋಗದೊಂದಿಗೆ ಕೃಷಿ ಇಲಾಖೆ ಕುಂದಾಪುರ, ಉಡುಪಿ ಮತ್ತು ಜ್ಞಾನಚೇತನ ಕಂಪ್ಯೂಟರ್‌ ಅಕಾಡೆಮಿ, ಕೋಟ ಇವರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲನಯನ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಹದಿನೈದು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 22-05-2024 ರಂದು ಉಡುಪಿ ಜಿಲ್ಲೆಯ ಕೋಟ ಜ್ಞಾನಚೇತನ ಕಂಪ್ಯೂಟರ್‌ ಅಕಾಡೆಮಿಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು.
ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕರಾದ ಶ್ರೀ. ಅರವಿಂದ ಡಿ ಬಾಳೇರಿಯವರು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸ್ವಉದ್ಯೋಗವೇ ನಿರೋದ್ಯೋಗಕ್ಕೆ ಮೂಲ ಪರಿಹಾರ ಎಂದು ಹೇಳುವ ಮೂಲಕ ಸಿಡಾಕ್ ಸಂಸ್ಥೆಯ ಕಾರ್ಯವೈಖರಿ, ಸಿಡಾಕ್ ಸಂಸ್ಥೆ ನಡೆಸುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು. ಉದ್ಯಮದಾರರು ಸದಾಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದು ಉತ್ತಮಎಂದು ತಿಳಿಸಿದರು. ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸುಪ್ರಭ –ಕೃಷಿ ಇಲಾಖೆ ಅಧಿಕಾರಿಗಳು,ಕೋಟ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಇರುವ ಉದ್ಯಮ ಅವಕಾಶಗಳ ಬಗ್ಗೆ ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಯಾದ, ಉಷಾ-ಜಿಲ್ಲಾ ಜಲನಯನ ಸಂಯೋಜಕರು, ಉಡುಪಿ
ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉದ್ಯೋಗ ನೀಡಲು ಸರ್ಕಾರಕ್ಕೆ ಅಸಾಧ್ಯದ ಮಾತಾಗಿದೆ.ಆದ್ದರಿಂದ ಸ್ವಂತ ಉದ್ಯೋಗವನ್ನು ಸ್ಥಾಪಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಶ್ರೀಮತಿ ಜ್ಯೋತಿ ಪ್ರಶಾಂತ- ಸಂಪನ್ಮೂಲ ವ್ಯ̧ಕ್ತಿ, ಉಡುಪಿ ಅವರು ಅಭ್ಯರ್ಥಿಗಳಿಗೆ ಉದ್ಯಮಶೀಲತೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿವಿಧ ಚಟುವಟಿಕೆಗಳನ್ನು ನಡೆಸಿದರು. ಅವರು ಮಾನವೀಯ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳ ಬಗ್ಗೆ ತಿಳಿಸಿದರು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಅಭ್ಯರ್ಥಿಗಳಿಗೆ ಹೇಳಿದರು.
ಜ್ಞಾನಚೇತನ ಕಂಪ್ಯೂಟರ್‌ ಅಕಾಡೆಮಿ, ಕೋಟ ಇದರ ಕೇಂದ್ರ ಮುಖ್ಯಸ್ತರಾದ ಚೇತನ. ಎಂ ಇವರು ಅಭ್ಯರ್ಥಿಗಳಿಗೆ ಶುಭಾಶಯವನ್ನು ಹಾರೈಸಿದರು.


ಸಿಡಾಕ್ ಉಡುಪಿ ಕಛೇರಿಯ ತರಬೇತುದಾರರಾದ ಕುಮಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಸಿಡಾಕ್ ಉಡುಪಿ ಕಛೇರಿಯ ತರಬೇತುದಾರರಾದ ಶ್ರೀ ಪೃಥ್ವಿರಾಜ್ ಎಂ ನಾಯಕ್. ಉಪಸ್ಥಿತರಿದ್ದರು.