ಡೈಲಿ ವಾರ್ತೆ: 23/ಮೇ /2024
ಶಿವಮೊಗ್ಗ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ದುರ್ಮರಣ
ಶಿವಮೊಗ್ಗ: ಕೃಷಿಯ ಕೆಲಸ ಮಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ನಡೆದಿದೆ.
ಮೃತ ದುರ್ದೈವಿಗಳು ಚನ್ನಹಳ್ಳಿ ಅಭಯ್(16), ಮಾಲತೇಶ್(27) ಎಂದು ಗುರುತಿಸಲಾಗಿದೆ.
ಹೊಲದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದು. ಈ ವೇಳೆ ಬಾಲಕ ಅಭಯ ಕೂಡ ಇಂದು ಪೋಷಕರ ಹೊಲದಲ್ಲಿ ಕೃಷಿ ಕೆಲಸಕ್ಕೆ ಸಹಾಯ ಮಾಡಲು ಹೋಗಿರುತ್ತಾನೆ. ಈ ವೇಳೆ ಬಾಲಕ ಅಭಯ್ ಬಾಯಾರಿಕೆಯಿಂದ ಕೃಷಿ ಹೊಂಡದಲ್ಲಿರುವ ನೀರನ್ನು ಕುಡಿಯಲು ಮುಂದಾಗಿದ್ದಾನೆ. ಅಭಯ್ ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದನ್ನು ದೂರದಲ್ಲಿ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಹದಗೊಳಿಸುತ್ತಿದ್ದ ಮಾಲತೇಶ್ ನೋಡಿ ಆತ ತಕ್ಷಣ ಕೃಷಿ ಹೊಂಡದ ಬಳಿ ದೌಡಾಯಿಸಿದ್ದಾನೆ. ಆದರೆ ಆತನ ಬಚಾವ್ ಮಾಡಲು ಹೋಗಿದ್ದ ಮಾಲತೇಶ್ ಕೂಡ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ನೀರು ಪಾಲಾಗಿದ್ದಾರೆ. ಇದನ್ನು ನೋಡಿದ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ ಪ್ರಯೊಜನವಾಗಿಲ್ಲ. ಇಬ್ಬರ ಜೀವ ಆಗ್ಲೇ ಹೋಗಿಬಿಟ್ಟಿತ್ತು.
ನೀರು ಪಾಲಾಗಿದ್ದ ಇಬ್ಬರ ಶವವನ್ನು ಗ್ರಾಮಸ್ಥರೇ ಮೇಲೆಯೆತ್ತಿದ್ದಾರೆ. ಇಬ್ಬರ ಸಾವು ನೋಡಿದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರು ಇಬ್ಬರು ಪತ್ಯೇಕ ಕುಟುಂಬ. ಆದರೆ ಇಬ್ಬರು ಚನ್ನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದುವೆಯಾಗಿ ಕೇವಲ 1 ವರ್ಷದಲ್ಲೇ ಪತಿ ಸಾವು: ಪತ್ನಿಗೆ ಶಾಕ್ ಮೃತ ಪಟ್ಟ ಬಾಲಕ ಅಭಯ ಇನ್ನೂ ಪ್ರಪಂಚವನ್ನೇ ನೋಡಿರಲಿಲ್ಲ. ಬಾಲಕನ ಸಾವು ಕುಟುಂಬಸ್ಥರಿಗೆ ದೊಡ್ಡ ಆಘಾತ ತಂದಿದೆ. ಹೆತ್ತವರು ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಇನ್ನೂ ಬಾಲಕನ ಬಚಾವ್ ಮಾಡಲು ತೆರಳಿದ್ದ ಮಾಲತೇಶ್ನ ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ಅಭಯನ ಜೀವ ಉಳಿಸಲು ಹೋಗಿ ಮಾಲತೇಶ್ ತನ್ನ ಜೀವ ಕಳೆದುಕೊಂಡಿದ್ದಾನೆ. ಮಾಲತೇಶ್ ಪತ್ನಿಗೆ ಪತಿ ಸಾವು ದೊಡ್ಡ ಶಾಕ್ ನೀಡಿದೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.