



ಡೈಲಿ ವಾರ್ತೆ: 23/ಮೇ /2024


ಉಡುಪಿ ಜಿಲ್ಲೆಯ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಉಸ್ತುವಾರಿಗಳಾಗಿ ಪ್ರೊ. ಸುಧೀರ್ ಆರ್. ಹೆಗ್ಡೆ ನೇಮಕ
ಉಡುಪಿ: ಮುಂಬರುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಗೆ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲು ಮಾನ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಮಂಜುನಾಥ ಭಂಡಾರಿ ಅವರ ಶಿಫಾರಸಿನ ಮೇಲೆ ಬ್ರಹ್ಮಾವರ ಮಂದಾರ್ತಿಯ ಪ್ರೊ. ಸುಧೀರ್ ಆರ್. ಹೆಗ್ಡೆಯವರನ್ನು ನೈರುತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಳಿಸಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ .ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.