ಡೈಲಿ ವಾರ್ತೆ: 28/ಮೇ /2024

ಸಅದಿಯ್ಯ ಶರೀಅತ್ ಕಾಲೇಜು ಕರ್ನಾಟಕ ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು :  ಜಾಮಿಯಾ ಸಅದಿಯ್ಯ ಅರಬಿಯಾ ಶರೀಅತ್ ಕಾಲೇಜ್ ವಿಧ್ಯಾರ್ಥಿ ಸಂಘಟನೆ  ಮಿಸ್ಬಾಹುಸ್ಸುಆದ ಆರ್ಗನೈಸೇಶನ್ ಕನ್ನಡ ಸ್ಟೂಡೆಂಟ್ಸ್  ( MOKS )  ಇದರ  2024 – 25 ನೇ  ಶೈಕ್ಷಣಿಕ ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

    ಪ್ರಸ್ತುತ ಕಾರ್ಯಕ್ರಮದಲ್ಲಿ ಜಾಮಿಯ ಸಅದಿಯ್ಯ. ಅರಬಿಯಾ ಇದರ ಪ್ರಧಾನ ಕಾರ್ಯದರ್ಶಿ ಕೆ.ಸಿ ರೋಡ್ ಉಸ್ತಾದ್, ಸಅದಿಯ್ಯ ಪ್ರಾಂಶುಪಾಲ ಮಾಣಿಕೋತ್ ಉಸ್ತಾದ್, ಉಪನ್ಯಾಸಕ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ , ಕುಟ್ಟಿಶೇರಿ ಉಸ್ತಾದ್,
ಉಬೈದುಲ್ಲಾ ಉಸ್ತಾದ್,
ಕೆ,ಕೆ ಉಸ್ತಾದ್ ಮೊದಲಾದವರು ಭಾಗವಹಿಸಿದ್ದರು.

       ಸಂಘಟನೆಯ ಅಧ್ಯಕ್ಷರಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಹಾದಿ ಸಾಗರ, ಉಪಾಧ್ಯಕ್ಷಕರಾಗಿ ತುಫೈಲ್ ಕಕ್ಕಿಂಜೆ, ಸಯ್ಯಿದ್ ಶಮ್ಮಾಸ್ , ಪ್ರಧಾನ ಕಾರ್ಯದರ್ಶಿಯಾಗಿ ಶಂಶುದ್ದೀನ್ ಬಕ್ಕರಬಳ್ಳಿ, ಜೊತೆ ಕಾರ್ಯದರ್ಶಿ ಯಾಗಿ ನೌಷಾದ್ ಪೆರುವಾಜೆ, ರಿಫಾತ್ ಉಪ್ಪಿನಂಗಡಿ, ಸಾಲಿಂ ನೆಲ್ಯಾಡಿ ಹಾಗೂ ಕೋಶಾಧಿಕಾರಿಯಾಗಿ ತಶ್ರೀಫ್ ಬೆಳಂದೂರು ಅವರು ಆಯ್ಕೆಯಾದರು.

     ಯಾಸೀರ್ ಕೀಶೇರಿ ಸ್ವಾಗತಿಸಿ,  ವಂದಿಸಿದರು.