ಡೈಲಿ ವಾರ್ತೆ: 06/ಜೂ./2024

ನರೇಂದ್ರ ಮೋದಿ ಪ್ರಮಾಣವಚನ ಕಾರ್ಯಕ್ರಮ ದಿಢೀರ್‌ ಮುಂದೂಡಿಕೆ!

ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಎನ್‌ಡಿಎ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಒಂದು ದಿನ ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜೂ.8ರಂದು ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ಮೊದಲಿಗೆ ಮಾಹಿತಿ ನೀಡಿದ್ದವು. ಇದಾದ ಬಳಿಕ ಈ ಬಗ್ಗೆ ಬಿಗ್‌ ಅಪ್ಡೇಡ್‌ವೊಂದನ್ನು ನೀಡಿರುವ ಮೂಲಗಳು ಪ್ರಮಾಣವಚನ ಕಾರ್ಯಕ್ರಮ ಜೂ.9ರಂದು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಈ ಮಹತ್ವದ ಬದಲಾವಣೆಗೆ ಕಾರಣ ಏನೆಂಬುದರ ಬಗೆ ಯಾವುದೇ ಮಾಹಿತಿ ಇಲ್ಲ.