ಡೈಲಿ ವಾರ್ತೆ: 10/ಜೂ./2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಇದರ 2024-25ನೇ ಸಾಲಿನ ಪಾಲಕರ-ಶಿಕ್ಷಕರ ಸಭೆ

ಕುಂದಾಪುರ: 2024-25 ನೇ ಸಾಲಿನ  ಶೈಕ್ಷಣಿಕ ವರ್ಷದ ಪ್ರಸ್ತುತ ಸಾಲಿನ ಕಾರ್ಯವೈಖರ್ಯ ಕುರಿತು ಸಂಕ್ಷಿಪ್ತ ನೀತಿ, ನಿಯಮಗಳು, ಶಿಸ್ತು, ಶೈಕ್ಷಣಿಕ ವಿಚಾರಗಳು ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಲು ಪ್ರಥಮ ವರ್ಷದ PCMB  ವಿಜ್ಞಾನ ವಿಭಾಗದ ವಸತಿನಿಲಯ ವಿದ್ಯಾರ್ಥಿಗಳ ಆರಂಭದ ಶಿಕ್ಷಕರ ಸಭೆ ಜೂ.10 ರಂದು ಸೋಮವಾರ ಬೆಳಿಗ್ಗೆ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್  ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ  ಉದ್ಘಾಟಿಸಿದರು.
ಶುಭ ಹಾರೈಸಿ ಮಾತನಾಡಿದ ಅವರು ಈ ಎಕ್ಸಲೆಂಟ್ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಅತ್ಯಂತ ಭಾವನಾತ್ಮಕವಾಗಿ   ಪ್ರಸ್ತುತಪಡಿಸಿದರು.
ಅಲ್ಲದೆ ಈ ಗ್ರಾಮೀಣ ಭಾಗದಲ್ಲಿ ವಿದ್ಯಾ ಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಗ್ರಾಮೀಣ ಪ್ರತಿಭೆಯನ್ನು ಪೋಷಿಸಿ ಬೆಳೆಸುವ ಮನಸ್ಸನ್ನು ಹೊತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾವು ಪಣತೊಟ್ಟಿದ್ದೇವೆ ಎಂದರು.
ಬೋಧಕ ಸಿಬ್ಬಂದಿ ವರ್ಗ ಹಾಗೂ ನಡೆಯುವ ತರಗತಿಗಳು, ಕಾಲೇಜಿನ ಸಕಲ ಸವಲತ್ತುಗಳನ್ನು ತಿಳಿಸಿದರು. ಪಾಲಕರು ಹಾಗೂ ಎಲ್ಲರೂ ಸಕಾರಾತ್ಮಕ ಮಾತುಗಳನ್ನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ವಿಯಾಗುವಂತೆ ಸಹಕರಿಸಬೇಕೆಂದು ಎಲ್ಲರೂ ಉತ್ತಮವಾದ ಸ್ಪಂದನೆಯನ್ನು ಕೊಡಬೇಕೆಂದು ಕೇಳಿಕೊಂಡರು.

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ನ ಆಡಳಿತ ಪ್ರಾಂಶುಪಾಲರಾಗಿರುವ ನಾಗರಾಜ್ ಶೆಟ್ಟಿ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯವೈಖರ್ಯ ಕುರಿತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿ.
ಶಿಕ್ಷಣವನ್ನು ಭದ್ರತೆ ಗೊಳಿಸಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಪಾಲಕರಲ್ಲಿರುವ ಗೊಂದಲಗಳಿಗೆ ತೆರೆ ಎಳೆದರು. ಅಲ್ಲದೆ ಪರೀಕ್ಷಾ ಫಲಿತಾಂಶ, ಪರೀಕ್ಷಾ ತಯಾರಿ, ಉಪನ್ಯಾಸಕರ ಮಾರ್ಗದರ್ಶನ ಕಾಲೇಜ್ ವಸತಿ ನಿಲಯದಲ್ಲಿ ದೊರೆಯುವ ವಿವಿಧ ಸವಲತ್ತುಗಳು  ಮತ್ತು ಸಂಸ್ಥೆಯ ವಿಶೇಷತೆಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ವಿದ್ಯಾರ್ಥಿಗಳು ಸತತವಾಗಿ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಶಿಕ್ಷಣ ಸಂಸ್ಥೆಯ ತರಬೇತಿಯೊಂದಿಗೆ ಹೆತ್ತವರ ಸೂಕ್ತ ಮಾರ್ಗದರ್ಶನ ಬೇಕೆನ್ನುವುದರೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕಾದರೆ ಶಿಸ್ತು ಮತ್ತು ಶ್ರದ್ಧೆಯಿಂದ ಕಲಿಕೆಯನ್ನು ತೊಡಗಿಸಿಕೊಳ್ಳಬೇಕು, ಗುರು ಹಿರಿಯರಿಗೆ ಗೌರವ ಕೊಡುವುದರೊಂದಿಗೆ ಸ್ವೇಚ್ಛಾಚಾರವಂತರಾಗಿ ಉತ್ತಮ ನಡೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಿಸಿಎಂಬಿ ವಿಭಾಗದ ಮುಖ್ಯಸ್ಥರಾಗಿರುವ  ವಿದ್ಯಾ ಮೇಡಂ, ರಜಿನಿ ಮೇಡಂ, ಸ್ಮಿತ್ತಲ್ ಮೇಡಂ, ಹಾಗೂ ಶ್ರೀ ಹರಿ ಶರ್ಮ ಇವರುಗಳು ವಿದ್ಯಾರ್ಥಿಗಳ ಯಶಸ್ವಿಗೆ ಮುನ್ನುಡಿಯಾಗಿ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯ ವಿಷಯಗಳ ಬಗ್ಗೆ ತಮ್ಮ  ಯೋಜನೆ, ಯೋಚನೆಗಳನ್ನು ಪಾಲಕರಿಗೆ,ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು.
ಅಧ್ಯಾಪಕ ಶ್ರೀನಿವಾಸ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.