ಡೈಲಿ ವಾರ್ತೆ: 10/ಜೂ./2024

ಎಕ್ಸಲೆಂಟ್ ಕಾಲೇಜ್ ಕುಂದಾಪುರ: ಜೆ.ಇ.ಇ ಅಡ್ವಾನ್ಸ್ ನಲ್ಲಿ ಸಾಧನೆ”

2024ರ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಎಕ್ಸಲೆಂಟ್, ಕುಂದಾಪುರದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಗಳಿಸಿದ್ದಾರೆ.

ಇದರಲ್ಲಿ ಚಿರಾಗ್ 1626 ರ‍್ಯಾಂಕ್  ಹಾಗೂ ನಿಶಾ 4306 ರ‍್ಯಾಂಕ್ ನ್ನು ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಎಕ್ಸಲೆಂಟ್‍ನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಅತ್ಯುತ್ತಮವಾದ ಸಾಧನೆಯನ್ನು ಗಳಿಸಿದ ಈ ಹೆಮ್ಮೆಯ ವಿದ್ಯಾರ್ಥಿಗಳಿಗೆ ಎಕ್ಸಲೆಂಟ್‍ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.