



ಡೈಲಿ ವಾರ್ತೆ: 18/ಜೂ./2024


ಉಡುಪಿ: ಪೆಟ್ರೋಲ್ ಪಂಪ್‌ನ ಜನರೇಟರ್‌ನಲ್ಲಿ ಬೆಂಕಿ – ತಪ್ಪಿದ ಭಾರೀ ದುರಂತ!
ಉಡುಪಿ: ಇಲ್ಲಿನ ಸಿಟಿಬಸ್ ನಿಲ್ದಾಣ ಬಳಿಯ ಪೆಟ್ರೋಲ್ ಪಂಪ್‌ನ ಜನರೇಟರ್‌ನಲ್ಲಿ ವಿದ್ಯುತ್ ಶಾರ್ಟ್ ಆಗಿ ಕಾರ್ಮಿಕರ ಸಮಯ ಪ್ರಜ್ಞೆಯಿಂದ ಬಹು ದೊಡ್ಡ ದುರಂತ ತಪ್ಪಿದೆ.
ಉಡುಪಿಯ ಸಿಟಿಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯ ಮಂಜೇಶ ಮಂಗೇಶಾ ಪೆಟ್ರೋಲ್‌ನ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಪಂಪ್‌ನ ಸಿಬ್ಬಂದಿಗಳು ಎಚ್ಚೆತ್ತು ಜನರೇಟರ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಗೆ ತಂದು ಬೆಂಕಿ ನಂದಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪೆಟ್ರೋಲ್ ಪಂಪ್ ಸಿಬಂದಿಯ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.