ಡೈಲಿ ವಾರ್ತೆ: 19/ಜೂ./2024
ಶತಮಾನ ಕಂಡ ಸಾಹಿತಿ ಡಾ. ಸಿದ್ದಯ್ಯ ಪುರಾಣಿಕ ವಿಪುಲ
ಬೆಳಗಾವಿ: ಸಿದ್ದಯ್ಯ ಪುರಾಣಿಕರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರು ಪ್ರವೃತ್ತಿಯಲ್ಲಿ ಸಾಹಿತಿಗಳು ಅವರ ಸಾಹಿತ್ಯ ರಾಶಿ ವಿಫಲವಾಗಿದೆ ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಬೆಳಗಾವಿ 19 ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಮೃತುಂಜಯ ಸ್ವಾಮಿಗಳು ಹಿರೇಮಠ ಅವರು ಉಪನ್ಯಾಸ ನೀಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರಾದ ಸಿದ್ದಯ್ಯ ಪುರಾಣಿಕರು ವಚನ ಬಿರುದಾಂಕಿತ ಕಾವ್ಯಾನಂದ ವಚನೋನದ್ಧಾರಕ ಅಣುಭಾವಿ ಬಿರುದಾಂಕಿತ ಕಾವ್ಯಾನಂದ ಕಾವ್ಯನಾಮ ಅಂಕಿತ ಐಎಎಸ್ ಸಹೃದಯತೆಯ ಶ್ರೇಷ್ಠ ಸಾಹಿತಿಗಳು ಏನಾದರೂ ಆಗು ಮೊದಲು ಮಾನವನಾಗು ಎಂದು ಸಂದೇಶ ನೀಡಿದ ಕನ್ನಡಕ್ಕೆ ಕಾವ್ಯದ ಆನಂದ ನೀಡಿದ ಕವಿ ಎಂದು ಬಾಲ್ಯದಿಂದ ಹಿಡಿದು ಕೊನೆಯವರೆಗೆ ಮಾಡಿದ ಸಾಧನೆಗಳ ಬಗ್ಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಂಗಳಮೆಟಗುಡ್ಡ ಅವರು ಇಂದು ಸಾಕಷ್ಟು ಜನ ಸೇರಿದ್ದು ಹಾಗೂ ಅವರು ಸಹ ಕಾವ್ಯ ,ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ, ಕಾದಂಬರಿ, ಕಥೆ ,ಅನುವಾದ, ವಚನ ಸಾಹಿತ್ಯ ,ಆಡು ಮುಟ್ಟದ ಎಲೆ ಇಲ್ಲದಂತೆ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದರು ಎಂದರು. ಎಂವೈ ಮೆಣಸಿನಕಾಯಿಯವರು ಆಶಾವಾದಿಯ ವಿಷಾದ ವಿದ್ಯೆ ಬಂತು ವಿನಯಹೋಯಿತು ಅವರ ವಚನ ಹೇಳಿದರು ಹಾಗೂ ಹಾಗೂ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಮುಂದೆ ಮಾಡಬೇಕಾದ ಕಾರ್ಯಗಳು ಮತ್ತು ಸದಸ್ಯತ್ವ ನವೀಕರಣ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಪ್ರಾಚಾರ್ಯ ವಿರುಪಾಕ್ಷಿ ದೊಡ್ಡಮನಿ ಸುರೇಶ ನರಗುಂದ ಕ ಸಾ ಪ ಮಾಜಿ ಅಧ್ಯಕ್ಷ ಮೋಹನ್ ಗೌಡ ಪಾಟೀಲ್ ಮಾತನಾಡಿದರು ವ್ಹಿ ಎಮ್ ಅಂಗಡಿ ಸರ್ವರನ್ನು ಸ್ವಾಗತಿಸಿದರು ಮಹಾನಂದ ಪಾರು ಶೆಟ್ಟಿ ನಾಡಗೀತೆ ವಚನ ಹೇಳಿದರು ವಿದ್ಯಾ ಸಿದ್ದಪ್ಪ ಕಾಗಿ ಹಾಗೂ ಇತರರನ್ನ ಸನ್ಮಾನಿಸಲಾಯಿತು.
ಶಂಕರ್ ಬಾಯಿ ಕೆ ನಿಂಬಾಳಕರ. ರ್ಶಿವಾನಂದತಲ್ಲೂರ, ಶ್ರೀರಂಗ ಜೋಶಿ, ಬಿ ಬಿ ಮಠಪತಿ, ಬಾಳಗೌಡ ದೊಡ್ಡಬಂಗಿ , ರತ್ನಪ್ರಭಾ ಬೆಲ್ಲದ,ಸುಧಾ ಪಾಟೀಲ್, ದಾನಮ್ಮ ಅಂಗಡಿ, ಇತರ ಉಪಸ್ಥಿತರಿದ್ದರು.
ಡಾಕ್ಟರ್ ಹೇಮಾ ಸೊನಳ್ಳಿ ನಿರೂಪಿಸಿದರು. ಆರ ಬಿ ಬನಶಂಕರಿ ಪರಿಚಯಿಸಿದರು.ಜ್ಯೋತಿ ಬದಾಮಿ ವಂದಿಸಿದರು.