



ಡೈಲಿ ವಾರ್ತೆ: 22/ಜೂ./2024


ಉಪ್ಪಿನಂಗಡಿ: ಶಾರ್ಟ್ ಸರ್ಕ್ಯೂಟ್ ನಿಂದ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅವಘಡ – ಹಲವು ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿ
ಉಪ್ಪಿನಂಗಡಿ: ಉಪ್ಪಿನಂಗಡಿ ಪೇಟೆಯಲ್ಲಿರುವ ಪೃಥ್ವಿ ಕಾಂಪ್ಲೆಕ್ಸ್ ನ ಫ್ಯಾನ್ಸಿ ಅಂಗಡಿಯೊಂದರಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಅಂಗಡಿಯನ್ನು ಸಂಪೂರ್ಣವಾಗಿ ಆವರಿಸಿ ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಮಾಹಿತಿ ಲಭಿಸಿದೆ.
ಪೃಥ್ವಿ ಮಹಲ್ ನಲ್ಲಿನ ಅಂಗಡಿ ಮಾಲಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮೊದಲಿಗೆ ಸಫಾ ಫ್ಯಾನ್ಸಿ ಅಂಗಡಿಯಿಂದ ಹೊಗೆ ಕಾಣಿಸಿಕೊಂಡಿತ್ತು ಬಳಿಕ ಮೊಬೈಲ್ ಬಟ್ಟೆ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂಬ ವ್ಯಕ್ತವಾಗಿದೆ.