ಡೈಲಿ ವಾರ್ತೆ: 25/ಜೂ./2024

🖊️.ಸುರೇಂದ್ರ ಕಾಂಚನ್ ಸಂಗಮ್

ಗೋಪಾಡಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೌಕರ್ಯ ಒದಗಿಸಿದ ರೋಟರಿ ಸಂಸ್ಥೆ ಹಾಗೂ ದಾನಿಗಳು

ಕುಂದಾಪುರ: ಗೋಪಾಡಿ ರೋಟರಿ ಕ್ಲಬ್ ಕೋಟೇಶ್ವರ ಇವರ ನೇತ್ರತ್ವದಲ್ಲಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಪಾಡಿ ಪಡು ಇದರ ಎಲ್ಲಾ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್‌’ನ ಅಧ್ಯಕ್ಷರಾದ Rtn ಜಗದೀಶ್ ಮೊಗವೀರ ಇವರ ವತಿಯಿಂದ ನೀಡಲಾದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ದಾನಿಗಳು ಕೊಡ ಮಾಡಿದ ಕಲಿಕಾ ಸಾಮಗ್ರಿಗಳು, ಮತ್ತು ನೋಟ್ ಬುಕ್ ವಿತರಣೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಪಾಡಿ ಪಡು ಇಲ್ಲಿ ನೆರವೇರಿತು.

ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷರಾದ ಜಗದೀಶ್ ಮೊಗವೀರ ಇವರು ಕೊಡಮಾಡಿದ ಉಚಿತ ಸಮ ವಸ್ತ್ರಗಳನ್ನು ಟ್ರ್ಯಾಕ್ ಸೂಟ್ ಶಾಲಾ ಮಕ್ಕಳಿಗೆ ವಿತರಿಸಲಾಯಿತು.

ಈ ವೇಳೆ ಕೋಟೇಶ್ವರ ರೋಟರಿ ಕ್ಲಬ್’ನ 2024-25ನೇ ಸಾಲಿನ ನೂತನ ಅಧ್ಯಕ್ಷರಾದ Rtn ಸತೀಶ್ ಎಂ. ನಾಯ್ಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು,

ಈ ಸಂದರ್ಭದಲ್ಲಿ ಕೋಟೇಶ್ವರ ರೋಟರಿ ಕ್ಲಬ್’ನ ನಿಯೋಜಿತ ಕಾರ್ಯದರ್ಶಿ ಸುಭಾಷ್ ‘ಚಂದ್ರ ಶೆಟ್ಟಿ ಕೋಟೇಶ್ವರ ರೋಟರಿ ಕ್ಲಬ್’ನ ವಲಯ ಸೇನಾನಿ Rtn ಆನಂದ್ ಆಚಾರ್ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಶೆಟ್ಟಿ ಶಾಲಾ SDMC ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸುಬಣ್ಣ, ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಹೆಬ್ರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಹಾಗೂ ಕೋಟೇಶ್ವರ ರೋಟರಿ ಕ್ಲಬ್‌ನ ಮಾಜಿ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ್ ಕುಂಭಾಶಿ, ಸದಸ್ಯರಾದ ಗಣೇಶ್ ಆಚಾರ್ Rtn ಸುರೇಶ್ ವಕ್ವಾಡಿ, Rtn, ಸುಬ್ರಮಣ್ಯ ದೇವಾಡಿಗ, Rtn ವೀಶ್ ಎಸ್. ಕೊರವಡಿ, Rtn ಅರುಣ್ ದೇವಾಡಿಗ, ಅಂಗನವಾಡಿ ಶಿಕ್ಷಕಿ, ಜಯಂತಿ, ಸಹಾಯಕಿ ಸವಿತಾ ಶಾಲೆಯ ಕಂಪ್ಯೂಟರ್ ಶಿಕ್ಷಕಿ ಶ್ರೀಮತಿ ದೀಪಾ ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಶೆಟ್ಟಿ ಸ್ವಾಗತಿಸಿ
ಇದೆ ವೇಳೆ ದಾನಿಗಳಾದ ರಾಜೇಶ್ ಬಂಗೇರ, ಸತೀಶ್ ಪೂಜಾರಿ ಹೆಬ್ರಿಮನೆ, ಶ್ರೀಮತಿ ಮರಿಯ ಅಂಕದಕಟ್ಟೆ ಇವರ ಹೆಸರುಗಳನ್ನು ಪ್ರಸ್ತಾವಿಸಿದರು.
ಸಹ ಶಿಕ್ಷಕಿ ಮಾಲತಿ ನಾಯ್ಕ್ ವಂದನಾರ್ಪಣೆಗೈದರು.