ಡೈಲಿ ವಾರ್ತೆ: 08/ಜುಲೈ /2024

ಮಂಗಳೂರು ತಾಲೂಕಿನ ಶಾಲಾ- ಪಿಯು ಕಾಲೇಜ್‌’ಗೆ ಜು.08 ರಂದು(ಇಂದು) ರಜೆ ಘೋಷಣೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ತಾಲೂಕಿನ ಶಾಲಾ, ಪಿಯು ಕಾಲೇಜಿಗೆ ಜುಲೈ 08ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಮಂಗಳೂರು ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 08/07/224 ರಂದು ರಜೆಯನ್ನು ಘೋಷಿಸಲಾಗಿದೆ.