ಡೈಲಿ ವಾರ್ತೆ: 07/ಜುಲೈ /2024

ಕಾಪು: 07 SDPI ಕಾಪು ಕ್ಷೇತ್ರ ಸಮಿತಿ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ

ಎನ್‌ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ವತಿಯಿಂದ ಕಾಪು ತಾಲೂಕಿನ* ಹೃದಯ ಭಾಗವಾದ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ ಯವರು ಬಿಜೆಪಿ ಸರಕಾರ ಬಂದ ನಂತರ ಗುಂಪು ಹತ್ಯೆಯಂತಹ ಘೋರವಾದ ಕೃತ್ಯಕ್ಕೆ ಚಾಲನೆ ನೀಡಿದಂತಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಇಂತಹ ಕೃತ್ಯ ಮರುಕಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಮಜೀದ್ ಹಸನ್ ಬೀರಲಿ ರವರು ಮಾತನಾಡಿ ಜೂನ್ ತಿಂಗಳಲ್ಲಿ ಇಂತಹ 7 ಗುಂಪು ಹತ್ಯೆಗಳು ನಡೆದಿದೆ. ಇಂತಹ ನೀಚ ಕೃತ್ಯಕ್ಕೆ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕಾಗಿ ಒತ್ತಾಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಪು ಕ್ಷೇತ್ರ ಸಮಿತಿ ಕಾರ್ಯದರ್ಶಿಯಾದ ಅಬ್ದುಲ್ ಖಾದರ್, ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಕಂಚಿನಡ್ಕ, ಹರ್ಶ್ ಇಬ್ರಾಹಿಂ, SDPI ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷರಾದ ಆಸಿಫ್ ವೈ ಸಿ, ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆಯಾದ ನಾಝಿಯ ನಸ್ರುಲ್ಲ ಮತ್ತು ವಿಮ್ ಕಾಪು ಘಟಕ ಅಧ್ಯಕ್ಷೆಯಾದ ಫರ್ಜಾನ ಹಮೀದ್ ರವರು ಉಪಸ್ಥಿತರಿದ್ದರು.