ಡೈಲಿ ವಾರ್ತೆ: 09/ಜುಲೈ /2024

ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಸಮುದಾಯದವರ ಹೊಸ ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಡಾ.ಪ್ರಕಾಶ್ ತೋಳಾರ್

ಕೋಟ: ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಟ್ಟಿ ಬೆಟ್ಟು ಕೊರಗ ಕಾಲನಿಯ ಕೊರಗ ಸಮುದಾಯದವರಿಗೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎಂಟು ನಿರ್ಮಾಣ ಕಾರ್ಯಕ್ಕೆ ಮನಸ್ಮಿತ ಫೌಂಡೆಶನ್ ಕೋಟ, ತೋಳಾರ್ ಓಶಿಯನ್ ಪ್ರಾಡಕ್ಟ್ ಕೋಟತಟ್ಟು ಪಡುಕರೆ ಇದರ ಮುಖ್ಯಸ್ಥರಾದ ಡಾ. ಪ್ರಕಾಶ್ ತೋಳಾರ್ ಅವರು ತಮ್ಮ ಸಂಸ್ಥೆಯಿಂದ ಎರಡು ಲಕ್ಷ ರೂಪಾಯಿ ಚೆಕ್ ಅನ್ನು ಫಲಾನುಭವಿಗಳಿಗೆ ಮುಂಗಡವಾಗಿ ನೀಡಿದರು.

ಅಲ್ಲದೆ ಮುಂದೆಯು ಕೋಟತಟ್ಟು ಗ್ರಾಮ ಪಂಚಾಯತಿಯ ಮನೆ ನಿರ್ಮಾಣದ ಮಹತ್ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿ ಗ್ರಾಮ ಪಂಚಾಯತಿಯ ಕಾರ್ಯವನ್ನು ಶ್ಲಾಘಿಸಿದರು.

ಈ ರೀತಿಯ ವಿನೂತನ ಕಾರ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗು ಎಲ್ಲಾ ಕಡೆಯು ಸಿಗುವಲ್ಲಿ ಆಯಾ ಭಾಗದ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗ ಬೇಕು ಆಗ ಸಮಾಜ ಸುಧಾರಣೆ ಜೊತೆಗೆ ದುರ್ಬಲರ ಏಳಿಗೆ ಸಾಧ್ಯ ಎಂದು ಪ್ರಶಂಸನೀಯ ಮಾತುಗಳನ್ನಾಡಿದರು.

ಈ ಸಂದರ್ಭ ಕೋಟತಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಸತೀಶ್ ಕುಂದರ್ , ಸದಸ್ಯರಾದ ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ಸೀತಾ , ಸಂಸ್ಥೆಯ ಮ್ಯಾನೇಜರ್ ಯೋಗೀಶ್ , ಮತ್ಸೋದ್ಯಮಿಗಳು, ಹಾಗು ಫಲಾನುಭವಿಗಳು ಉಪಸ್ಥಿತರಿದ್ದರು.