ಡೈಲಿ ವಾರ್ತೆ: 13/ಜುಲೈ /2024

ಬಂಟ್ವಾಳ : ನೇತ್ರಾವತಿ ನದಿ ನೀರಿನ‌ ಮಟ್ಟ 6.1ಕ್ಕೆ ಏರಿಕೆ – ಅಪಾಯದ ಮಟ್ಟ 8.0 ಮೀಟರ್

ಬಂಟ್ವಾಳ : ಬಂಟ್ವಾಳದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಏರಿಕೆಯಾಗಿದ್ದು ಸದ್ಯಕ್ಕೆ ನೀರಿನ ಮಟ್ಟ 6.1 ಮೀಟನಷ್ಟಿದೆ.ರ್ ನಲ್ಲಿ ಹರಿಯುತ್ತಿದೆ.

ಬಂಟ್ವಾಳದಲ್ಲಿ 8 ಮೀಟರ್ ಅಪಾಯದ ಮಟ್ಟವಾಗಿದ್ದು, 8.5 ಮೀ.ಟರ್ ತಲುಪಿದರೆ ತಗ್ಗು ಪ್ರದೇಶವಾದ ಪಾಣೆಮಂಗಳೂರಿನ ಆಲಡ್ಕ ಭಾಗದಲ್ಲಿ ಪ್ರವಾಹದ ನೀರು ಮನೆಯೊಳಗೆ ನುಗ್ಗುತ್ತದೆ.

 ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವ ಪರಿಣಾಮ ನೀರಿನ ಮಟ್ಟ ಹೆಚ್ಚಳಗೊಂಡಿದೆ. ನೀರು ಹೆಚ್ಚಳದಿಂದ ತುಂಬೆ ಡ್ಯಾಮ್ ಎಲ್ಲಾ ಗೇಟ್ ಗಳನ್ನು ತೆರವು ಮಾಡಿದರೆ ನೀರು ತೀರಾ ಇಳಿಕೆಯಾಗುವ ಸಾಧ್ಯತೆಯೂ ಇದೆ. ಉಪ್ಪಿನಂಗಡಿಯಲ್ಲೂ ನೀರಿನ ಮಟ್ಟ ಹೆಚ್ಚಳಗೊಂಡಿದೆ ಎನ್ನಲಾಗಿದೆ.

ನದೀ ತೀರದ ನಿವಾಸಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಅನಾವಶ್ಯಕವಾಗಿ ನದೀ ತೀರಕ್ಕೆ ತೆರಳುವುದು ಅಥವಾ ನೀರಿಗೆ ಇಳಿಯುವುದು ಸರಿಯಲ್ಲ ಎಂದು ಇಲಾಖೆ ಸೂಚಿಸಿದೆ. ಜಿಲ್ಲೆಯಲ್ಲಿ ಅಷ್ಟಾಗಿ ಮಳೆಯಿಲ್ಲದ ಕಾರಣ ಸಂಜೆ ವೇಳೆ ನೀರಿನ ಹರಿವು ಇಳಿ ಮುಖವಾಗುವ ಸಾದ್ಯತೆ ಇದೆ.
ಅಧಿಕಾರಿಗಳು ನದಿ ತೀರಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ ಎಂದು ತಿಳಿದುಬಂದಿದೆ.