ಡೈಲಿ ವಾರ್ತೆ: 14/ಜುಲೈ /2024
ರಿಪೋರ್ಟಿಂಗ್ ವೇಳೆ ನದಿ ನೀರಿಗೆ ಬಿದ್ದ ಪತ್ರಕರ್ತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು! (ವಿಡಿಯೋ ವೈರಲ್)
ಪತ್ರಕರ್ತರ ಬದುಕು ಸುಲಭದ್ದಲ್ಲ. ಅಪಾಯಕಾರಿ ಸ್ಥಳಗಳಿಗೆ ಹೋಗಿ ಅಥವಾ ಅನೇಕ ಸವಾಲುಗಳ ನಡುವೆಯೂ ಧೈರ್ಯವಾಗಿ ವರದಿ ಮಾಡಿ ಜನರಿಗೆ ಉಪಯುಕ್ತ ಮಾಹಿತಿ ನೀಡಿವ ಕಾರ್ಯ ಪತ್ರಕರ್ತರು ಮಾಡುತ್ತಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಪ್ರವಾಹ ಪೀಡಿತ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಿರುವಾಗ ವರದಿಗಾರರೊಬ್ಬರು ಆಯ ತಪ್ಪಿ ನದಿಗೆ ಬಿದ್ದಿದ್ದು, ಅದೃಷ್ಟವಶಾತ್ ಈಜುತ್ತಾ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ರಿಪೋರ್ಟಿಂಗ್ ವೇಳೆ ವರದಿಗಾರರೊಬ್ಬರು ಆಯ ತಪ್ಪಿ ನದಿಗೆ ಬಿದ್ದಿದ್ದಾರೆ. ಇತ್ತೀಚಿಗೆ ಉಂಟಾದ ಭಾರಿ ಮಳೆಯಿಂದ ಅಸ್ಸಾಂ ನಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಈ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರು ನದಿಯ ದಡದಲ್ಲಿ ನಿಂತು ಜನರ ಸಮಸ್ಯೆಗಳನ್ನು ವರದಿ ಮಾಡುತ್ತಿರುವಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಈಜುತ್ತಾ ಬಂದು ದಡ ಸೇರಿದ ವರದಿಗಾರ ಸ್ಥಳೀಯರ ಸಹಾಯದಿಂದ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.