ಡೈಲಿ ವಾರ್ತೆ: 14/ಜುಲೈ /2024

ಕೋಟ: ಪಿ.ಎಂ. ವಿಶ್ವಕರ್ಮ
ಯೋಜನೆಯ ಕಾರ್ಪೆಂಟರ್ ತರಬೇತಿದಾರರಿಗೆ ಸಂಸದ ಕೋಟ ಅವರಿಂದ ಪ್ರಮಾಣಪತ್ರ ವಿತರಣೆ

ಕೋಟ: ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪಿ ಎಮ್ ವಿಶ್ವಕರ್ಮ ಯೋಜನೆಯ ಕಾರ್ಪೆಂಟರ್ ತರಬೇತಿದಾರರಿಗೆ ಪ್ರಮಾಣಪತ್ರವನ್ನು ಮೊಸಾಯಿಕ್ ಸ್ಕಿಲ್ ಇನ್ಸ್ಟಿಟ್ಯೂಟ್, ಜ್ಞಾನ ಚೇತನ ಕಂಪ್ಯೂಟರ್ ಅಕಾಡೆಮಿ ಕೋಟ ಇಲ್ಲಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ , ಪ್ರಕಾಶ್ ಶೆಟ್ಟಿ ನಿವ್ರತ್ತ ಪ್ರಾಂಶುಪಾಲರು ಮೂಡುಬಿದಿರೆ, ಶ್ರೀ ದೇವಿ ಕಿರಣ ಕಾಂಪ್ಲೆಕ್ಸ್ನ ಮಾಲೀಕರು ಶ್ರೀಕಾಂತ್ ಶೆಣೈ, ಪ್ರವೀಣ್ ಶೆಟ್ಟಿ ಉದ್ಯಮಿ, ಜ್ಞಾನ ಚೇತನ ಸಂಸ್ಥೆಯ ಅಧ್ಯಕ್ಷರಾದ ಚೇತನ್ ಬಂಗೇರ ವೇದಿಕೆ ಹಂಚಿಕೊಂಡರು . ತರಬೇತಿದಾರರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಚೇತನ್ ಬಂಗೇರ ಎಲ್ಲರಿಗೂ ಸ್ವಾಗತಿಸಿದರು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಇವರು ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಿ ಕಲೆಯನ್ನು ಉಳಿಸಿ ಬೆಳೆಸಬೇಕೆಂದು ತರಬೇತಿದಾರರನ್ನು ಪ್ರೋತ್ಸಾಹಿಸಿದರು, ಪ್ರಕಾಶ್ ಶೆಟ್ಟಿ ನಿವ್ರತ್ತ ಪ್ರಾಂಶುಪಾಲರು ಮೂಡುಬಿದಿರೆ ಹಾಗೂ ಶ್ರೀ ದೇವಿ ಕಿರಣ ಕಾಂಪ್ಲೆಕ್ಸ್ನ ಮಾಲೀಕರು ಶ್ರೀಕಾಂತ್ ಶೆಣೈ ಹಿತವಚನ ನೀಡಿ ಆಶೀರ್ವದಿಸಿದರು.
ಸಂಸ್ಥೆಯ ನಿರ್ದೇಶಕಿ ರಮ್ಯಾ ಶ್ರೀ ಇವರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಸಿಬ್ಬಂದಿ ದೀಪಕ್ ಆಚಾರ್ಯ ಪೇತ್ರಿ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಸಮರ್ಪಿಸಿದರು.