ಡೈಲಿ ವಾರ್ತೆ: 15/ಜುಲೈ /2024

ಧಾರವಾಡದಲ್ಲಿ ಪಂ. ಪಂಚಾಕ್ಷರ ಗವಾಯಿಗಳ ಸ್ಮಾರಕ ನಿರ್ಮಾಣವಾಬೇಕು -ಚನ್ನವೀರಸ್ವಾಮಿ (ಕಡಣಿ)

ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ  ಸಂಗೀತದ ತವರು ಎನ್ನುವ ಖ್ಯಾತಿ ತಂದು ಕೊಟ್ಟ, ವಚನಗಳಿಗೆ ರಾಗ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ, ಮಾತ್ರವಲ್ಲದೇ ಭಾರತ ರತ್ನ ಭೀಮಸೇನ ಜೋಷಿಯವರಂತಹ ಮಹಾನ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗಾನಯೋಗಿ ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವಿಭೂತಿ ಪುರುಷ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ಸ್ಮಾರಕ ಧಾರವಾಡದಲ್ಲಿ ಆಗಬೇಕು ಎಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಹೇಳಿದರು. ಅವರು ದಿನಾಂಕ ೧೪ ರಂದು ಸಂಜೆ ಧಾರವಾಡದ ರಂಗಾಯಣದಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದ್ದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ೮೦ನೆಯ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಶ್ರೀಮತಿ ಮೃಣಾಲ ಜೋಶಿ ಗುರು ಪಂಚಾಕ್ಷರಿ ಗವಾಯಿಗಳವರ ಜೀವನ ಸಾಧನೆ ಸಂದೇಶವನ್ನು ವಿವರವಾಗಿ ವಿವರಿಸಿ ಪೂಜ್ಯರ ಕನ್ನಡ ಅಭಿಮಾನ, ಸ್ವದೇಶಿ ಅಭಿಮಾನ ಕುರಿತು ತಿಳಿಸಿದ್ದಲ್ಲದೆ ಅವರ ಆರೋಗ್ಯ ಕೆಟ್ಟಗ ದೇಶಿ ಔಷಧಿಯನ್ನೇ ಸ್ವೀಕರಿದಿದರು ಅವರು ಕೇವಲ 52 ವರ್ಷ ಬದುಕಿದ್ದರೂ ಆ ಸಾಮಾನ್ಯ ಸಾಧನೆ ಮಾಡಿದ ಪೂಜ್ಯ ಪಂಚಾಕ್ಷರ ಗವಾಯಿಗಳ ತತ್ವ ಆಚರಣೆ ಅಳವಡಿಸಿಕೊಳ್ಳುವ ಮೂಲಕ ನಾವು ಪಂಚಾಕ್ಷರ ಗವಾಯಿಗಳನ್ನು ಮನೆ ಮನೆಗೆ ಕರೆದೊಯ್ಯ ಬೇಕು ಎಂದು ಮನ ಮುಟ್ಟುವ ಹಾಗೆ ಮಾತಾಡಿದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರಿಯ  ಸ್ಮಾರಕ ಟ್ರಸ್ಟ್, ವ್ಯವಸ್ಥಾಪಕರಾದ ಪ್ರಕಾಶ ಬಾಳಿಕಾಯಿ, ಧಾರವಾಡ. ಕ. ವಿ. ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ, ಡಾ. ಎ. ಎಲ್ ದೇಸಾಯಿ, ಇವರುಗಳು ಮಾತನಾಡಿ, ಪಂಚಾಕ್ಷರ ಗುರುಗಳ ಹೆಸರು ಉಳಿಸುವ ನಿಟ್ಟಿನಲ್ಲಿ, ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಧಾರವಾಡದಲ್ಲಿ ಮಾದರಿಯ ಆಶ್ರಮ ಸ್ಥಾಪಸಲು ಪ್ರಯತ್ನಿಸುತ್ತಿರುವ ಬಗ್ಗೆ ತಿಳಿಸಿದರು. ಡಾ. ಸುಮಾ ಬಸವರಾಜ ಹಡಪದ, ಹಳಿಯಾಳ ದೇವಿಕಾ ಜೋಗಿ ಹೊಸಪೇಟೆ, ಡಾ. ಸುರೇಶ ಕಳಸಣ್ಣವರ ಕಲಘಟಗಿ ವೇದಿಕೆಯಲ್ಲಿ ಇದ್ದರು. 
ಧಾರವಾಡದ ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ, ‘ಮಾಸ್ಟರ್’ ಸಾತ್ವಿಕ್ ಜಿ. ಮಹಾಮನೆ ಇವರುಗಳು ಸಂಗೀತ ನಮನ ಸಲ್ಲಿಸಿದರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ಉಪಾಧ್ಯ ನೃತ್ಯ ವಿಹಾರ, ತಾಳಿಕೊಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ, ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸಿದರು. 


ಡಾ. ಸುರೇಶ ಕಳಸಣ್ಣವರ ಕಲಘಟಗಿ ಇವರ ಅಧ್ಯಕ್ಷತೆಯಲ್ಲಿ, ಪಂಚಾಕ್ಷರ ಗವಾಯಿಗಳವರ ಕುರಿತು ಬರೆದ ಕವಿತಿಗಳ ಕವಿಗೋಷ್ಠಿಯಲ್ಲಿ ಮೃತ್ಯುಂಜಯ ಹಿರೇಮಠ, ಪ್ರೊ ಜಯಶ್ರೀ ಹಿರೇಮಠ, ಪದ್ಮಾ ಜೆ. ಕಬಾಡಿ, ವೀರಯ್ಯ ಸಂಕಿನಮಠ, ಬಸವರಾಜ ಹಡಪದ, ವಿಮಲಾ ಹುಬ್ಬಳ್ಳಿ, ಸಂಧ್ಯಾ ದೀಕ್ಷಿತ, ಸುಲೋಚನ ಮಾಲಿಪಾಟೀಲ್ರೇ, ಖಾ ಜೋಶಿ, ವೀರೇಶರಡ್ಡಿ ಟಿ. ಕಾಮರಡ್ಡಿ, ದಾನಮ್ಮ ವೀ ಅಂಗಡಿ, ಮಧುಮತಿ ಸಣಕಲ್, ಸೀತಾ ಛಪ್ಪರ, ಧಾರವಾಡ, ಶಾರದಾ ಕೆಲಸಂಗದ, ಶಾಂತಕ್ಕ ಹೊಂಬಳ, ಇಂದಿರಾ ಮೋಟೆಬೆನ್ನೂರ, ಇವರುಗಳು ತಮ್ಮ ಕವನದ ಮೂಲಕ ಗುರು ಗುಣಗಾನ ಮಾಡಿದರು. ಶಶಿಕಲಾ ಅಕ್ಕಿ ಹಾವೇರಿ ಇವರು ಸ್ವಾಗತಿಸಿದರು. ಸುಧಾ ಕಬ್ಬೂರ ಇವರು ಕಾರ್ಯಕ್ರಮದ ನಿರೂಪಣೆ ಮಾಡಿ ವಂದನಾರ್ಪಣೆ ಸಲ್ಲಿಸಿದರು.

ಡಾ. ಸುಮಾ ಹಡಪದ ಹಳಿಯಾಳ