
ಡೈಲಿ ವಾರ್ತೆ:ಜನವರಿ/31/2026
ಕೋಡಿ ಬೆಂಗ್ರೆ ಪ್ರವಾಸಿ ದೋಣಿ ದುರಂತ: ವೇವ್ ರೈಡರ್ ಬೋಟ್ ಚಾಲಕ ಸೇರಿ ಮೂವರು ಬಂಧನ

ಉಡುಪಿ: ಉಡುಪಿಯ ಕೋಡಿ ಬೆಂಗ್ರೆ ಸಮೀಪ ನಡೆದ ಭೀಕರ ಪ್ರವಾಸಿ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ವೇವ್ ರೈಡರ್ ಬೋಟ್‌ನ ಚಾಲಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸೂಫಿಯಾನ, ವಾಸು ಮೆಂಡನ್ ಹಾಗೂ ಸುಹಾಸ್ ಶ್ರೀಯಾನ್ ಎಂದು ಗುರುತಿಸಲಾಗಿದೆ. ಜನವರಿ 26ರಂದು ಕೋಡಿ ಬೆಂಗ್ರೆ ಕರಾವಳಿ ಭಾಗದಲ್ಲಿ ನಡೆದ ಈ ದುರಂತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
ತನಿಖೆಯಲ್ಲಿ ಬೋಟಿನಲ್ಲಿ ಅಗತ್ಯವಾದ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ, ನಿಯಮ ಉಲ್ಲಂಘಿಸಿ ಬೋಟ್ ಚಲಾಯಿಸಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ ಪೊಲೀಸರು ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.