



ಡೈಲಿ ವಾರ್ತೆ: 16/ಜುಲೈ /2024


ಮಡಿಕೇರಿ: ಸ್ಕೂಟರ್ ಗೆ ಲಾರಿ ಡಿಕ್ಕಿ – ಸವಾರರಿಬ್ಬರು ಸ್ಥಳದಲ್ಲೇ ಸಾವು
ಮಡಿಕೇರಿ: ಸ್ಕೂಟರ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜು. 16 ರಂದು ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 275ರ ಕೊಡಗರಹಳ್ಳಿ ಹೊಸಕೋಟೆ ನಡುವಿನ ಮಾರುತಿ ನಗರದ ತಿರುವಿನಲ್ಲಿ ನಡೆದಿದೆ.
ಮೃತರನ್ನು ಗರಗಂದೂರು ಗ್ರಾಮದ ಮಂಜು(25) ಹಾಗೂ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಗ್ರಾಮದ ರಕ್ಷಿತ್ (22) ಎಂದು ಗುರುತಿಸಲಾಗಿದೆ.
ಮಂಜು ಹಾಗೂ ರಕ್ಷಿತ್ ಸುಂಟಿಕೊಪ್ಪದಿಂದ 7ನೇ ಹೊಸಕೋಟೆಗೆ ಊಟ ಮಾಡಿ ಬರಲೆಂದು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಕುಶಾಲನಗರದಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಹೇಳಲಾಗಿದೆ.
ಅಪಘಾತದ ಸಂದರ್ಭ ಇಬ್ಬರು ಹೆದ್ದಾರಿಗೆ ಬಿದಿದ್ದು ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಸಬ್‌ಇನ್ಸ್ ಪೆಕ್ಟರ್ ಸ್ವಾಮಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.