ಡೈಲಿ ವಾರ್ತೆ: 16/ಜುಲೈ /2024
ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕ ಮಳೆ, ವಿವಿಧೆಡೆ ಮಳೆ ಹಾನಿ
ಬಂಟ್ವಾಳ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ನೇತ್ರಾವತಿ ನದಿ ನೀರಿನ ಮಟ್ಟ 6.4 ಮೀಟರ್ ನಲ್ಲಿ ಹರಿಯುತ್ತಿದ್ದು ಅಪಾಯದ ಮಟ್ಟ 8.0 ಮೀಟರ್ ಆಗಿದೆ.
ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಪ್ರಮೀಳಾ ಕೋo ದಿ ಸುರೇಂದ್ರ ಶೆಟ್ಟಿಯವರ ಪಕ್ಕಾ ಮನೆಗೆ ಮರ ಬಿದ್ದು ಭಾಗಶ ಹಾನಿಯಾಗಿರುತ್ತದೆ.
ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಯೋಗಿನಿ ಕೋಂ ಶ್ರೀಧರ ರವರ ಮನೆ ಭಾಗಶ: ಹಾನಿಯಾಗಿರುತ್ತದೆ.
ಪುದು ಗ್ರಾಮದ ಸುಜಿರು ಎಂಬಲ್ಲಿ ಸುಶೀಲ ಕೋಂ ನಾಗೇಶ ರವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದಿದೆ ಆದರೆ ಮನೆ ಹಾಗೂ ಜೀವ ಹಾನಿ ಸಂಭವಿಸಿಲ್ಲ. ಅಮ್ಟಾಡಿ ಗ್ರಾಮದ ಕಲಾಯಿಕೋಡಿ ಎಂಬಲ್ಲಿ ಚಂದ್ರಶೇಖರ ಬಿನ್ ತ್ಯಾಂಪ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಹ ಹಾನಿಯಾಗಿರುತ್ತದೆ.
ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸುಬ್ಬ ಪಾಟಾಳಿ ಬಿನ್ ಶಂಕರ ಪಾಟಾಳಿ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿರುತ್ತದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.