ಡೈಲಿ ವಾರ್ತೆ: 18/ಜುಲೈ /2024

ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕ ಮಳೆ, ವಿವಿಧೆಡೆ ಮಳೆ ಹಾನಿ

ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದ್ದು ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

   ನೇತ್ರಾವತಿ ನದಿ ನೀರಿನ ಮಟ್ಟ 7.8 ಮೀಟರ್ ನಲ್ಲಿ ಹರಿಯುತ್ತಿದ್ದು ಅಪಾಯದ ಮಟ್ಟ 8.0 ಮೀಟರ್ ಆಗಿದೆ. ಬಂಟ್ವಾಳದ ತಗ್ಗು ಪ್ರದೇಶಗಳಲ್ಲಿ ವಿವಿಧೆಡೆ ಮನೆಗೆ ನೀರು ನುಗ್ಗುವ ಸಾದ್ಯತೆ ಇದ್ದು ನೆರೆ ಭೀತಿ ಎದುರಾಗಿದೆ.

 ಮಾಣಿ ಗ್ರಾಮದ ಕೊಡಾಜೆ -ಕೋಚಪಲ್ಕೆ ನಿವಾಸಿ ಸಂಜೀವ ಬಿನ್ ತನಿಯ ಮೇರ ಎಂಬುವವರು ಏಕಾಂಗಿಯಾಗಿ ವಾಸ್ತವ್ಯವಿದ್ದ ಶಿಥಿಲಗೊಂಡ ಮನೆಯು  ಬಿದ್ದು ಪೂರ್ಣ ಹಾನಿಗೊಂಡಿರುತ್ತದೆ‌‌. ಅವರು  ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ, 

ನೆಟ್ಲಮುಡ್ನೂರು ಗ್ರಾಮದ ಕಮಲಾಕ್ಷಿ ಕೋಂ ನವೀನ್ ಕುಮಾರ್ ರವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿರುತ್ತದೆ, ಬಾಳ್ತಿಲ ಗ್ರಾಮದ ಪಳನೀರು ಎಂಬಲ್ಲಿ ಮಳೆ ಗಾಳಿಯಿಂದ ಕಮಲ ಕೋಂ ಕೇಶವ ಕೊಟ್ಟಾರಿರವರ ಮನೆಗೆ ಹಾನಿಯಾಗಿರುತ್ತದೆ, ಕಾವಳಪಡೂರು ಗ್ರಾಮದ ಮಧ್ವ ಕೊಮ್ಮಾಲೆ ನಿವಾಸಿ ಮೀನಾಕ್ಷಿ ಎಂಬವರ ಮನೆಗೆ ತಾಗಿಕೊಂಡು ಇರುವ ಬಚ್ಚಲುಮನೆ ಸಂಪೂರ್ಣ ಹಾನಿಯಾಗಿರುತ್ತದೆ,
ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು, ಶಾಂತಿನಗರ ನಿವಾಸಿ
ನಿಜಾಮುದ್ದಿನ್ ಕೋಂ ಅಬ್ದುಲ್ ಕೆ ಎಚ್. ಇವರ ಮನೆ ಭಾಗಶ: ಹಾನಿಯಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ,