



ಡೈಲಿ ವಾರ್ತೆ: 19/ಜುಲೈ /2024


ಕಲ್ಲಡ್ಕ: ಎರ್ಮೆಮಜಲು ನಿವಾಸಿ ಜಿ.ಎಸ್. ಅಬ್ಬಾಸ್ (65) ನಿಧನ
ಬಂಟ್ವಾಳ : ಕಲ್ಲಡ್ಕ ಸಮೀಪದ ಎರ್ಮೆಮಜಲು ನಿವಾಸಿ ಜಿ.ಎಸ್. ಅಬ್ಬಾಸ್ (65)ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಗೋಳ್ತಮಜಲು ಹಜಾಜ್ ಸಂಸ್ಥೆಯಲ್ಲಿ ಚಾಲಕ ವೃತ್ತಿಯಲ್ಲಿದ್ದ ಅವರು ಎಲ್ಲರೋಂದಿಗೂ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.