ಡೈಲಿ ವಾರ್ತೆ: 21/ಜುಲೈ /2024

ಕೋಟ: ಯಡಾಡಿ ಮತ್ಯಾಡಿ ಜುಗಾರಿ ಆಟ – ಆರು ಜನರ ಬಂಧನ

ಕೋಟ: ಕುಂದಾಪುರ ತಾಲೂಕು ಯಡಾಡಿ – ಮತ್ಯಾಡಿ ಗ್ರಾಮದ ಮತ್ಯಾಡಿಯ ಮನೆಯೊಂದರಲ್ಲಿ ಜುಗಾರಿ ಆಡುತ್ತಿದ್ದ 6 ಜನ ಆರೋಪಿಗಳನ್ನು ಕೋಟ ಪೋಲೀಸರು ಬಂಧಿಸಿದ್ದಾರೆ.

ಠಾಣೆಯ ಸಬ್ಇನ್ಸ್ ಪೆಕ್ಟರ್ ಗುರುನಾಥ್ ಬಿ ಹಾದಿಮನಿ ಅವರಿಗೆ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ‌ ಮೇರೆಗೆ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಸುರೇಶ್‌, ಕೃಷ್ಣ , ಸಂತೋಷ್‌, ವಿಶ್ವನಾಥ, ಚಂದ್ರ, ರವಿ, ಸುದಾಕರ, ಸತೀಶ, ಆನಂದ ಹುಣ್ಸೆಮಕ್ಕಿ ಆಟದಲ್ಲಿ ನಿರತರಾಗಿದ್ದು, ಇವರುಗಳಲ್ಲಿ  6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ಒಟ್ಟು ರೂ. 1,090 ನಗದು ಹಾಗೂ 52 ಇಸ್ಪೀಟು ಎಲೆಗಳು, 6 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 2ಲಕ್ಷದ 61 ಸಾವಿರ ಆಗಿದೆ.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.