ಡೈಲಿ ವಾರ್ತೆ: 28/ಜುಲೈ /2024

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಸುಣ್ಣಾರಿ ಇದರ 2023-24ನೇ ಸಾಲಿನಲ್ಲಿ ಸಾಧನೆಗೈದಿರುವ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಸುಣ್ಣಾರಿ ಇದರ 2023 – 24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿವಿಧ ಶೈಕ್ಷಣಿಕ ಇಲಾಖೆಗಳು ನಡೆಸಿದ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದಿರುವ ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವು ಜು. 27 ರಂದು ಶನಿವಾರ ಮಧ್ಯಾಹ್ನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ನ ಸಭಾಂಗಣದಲ್ಲಿ ನಡೆಯಿತು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಎಂ. ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.

ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಮಾತೃಭೂಮಿಯ ಕುರಿತು ಸ್ತುತಿಸುವ ಮೂಲಕ ಶುಭಾರಂಭಗೊಂಡಿತು.

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಕೆ. ಚಂದ್ರಶೇಖರ್ ಶೆಟ್ಟಿ ಅವರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರೆವೇರಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳ ಬದುಕಿನಲ್ಲಿ ತತ್ವ, ಶಿಸ್ತು, ನಿಷ್ಠೆಗಳನ್ನು ಮೈಗೂಡಿಸಿ ಕೊಂಡು ಗೆಲುವಿನ ಹಾದಿಯಲ್ಲಿ ಸಾಗುವ ಛಲವಿದ್ದರೆ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು. ಅಲ್ಲದೆ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ನೀಟ್ ಪರೀಕ್ಷೆ ಬರೆದು ಸರ್ಕಾರಿ ಖೋಟಾದಲ್ಲಿ ನೀಟ್ ಸೀಟ್ ನ್ನು ಪಡೆದು ಕೊಂಡರೆ ಅದು ನೀವು ನಿಮ್ಮ ಕುಟುಂಬಕ್ಕೆ ನೀಡುವ ಒಂದು ಕೋಟಿ ರೂಪಾಯಿ ಬೆಲೆಯ ಕಾಣಿಕೆ ಆಗಿರುತ್ತದೆ ಎಂದು ಹುರಿದುಂಬಿಸಿದರು.
ಅಜ್ಞಾನ ಅಶ್ರದ್ದೇ ನಿರಾಶಕ್ತಿಯನ್ನು ಕಳಚಿ ಜಡತ್ತೆ ಆಲಸ್ಯಗಳ ಬಂಧನಗಳನ್ನು ಕಿತ್ತೊಗೆದರೆ ವಿದ್ಯಾರ್ಥಿಗಳು ಸಾಧನೆ ಶಿಖರವನ್ನು ಏರಬಲ್ಲರು ಎಂದರು.
ವಿದ್ಯೆಗೆ ವಿನಯ ಭೂಷಣ ಎಂದು ಹಲವಾರು ನಿದರ್ಶನಗಳನ್ನು ನೀಡಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಕೆ. ಚಂದ್ರಶೇಖರ್ ಶೆಟ್ಟಿ ಮಾತನಾಡಿದರು.

ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಹಾಗೂ ಕಾಲೇಜಿನ ಮುಖ್ಯೋಪಾಧ್ಯಾಯನಿ ಶ್ರೀಮತಿ ಸರೋಜಿನಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉಪನ್ಯಾಸಕಿ ಚರಿಷ್ಮಾ ರವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು.
ಅಧ್ಯಾಪಕ ಶ್ರೀನಿವಾಸ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ 2023 – 24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿವಿಧ ಶೈಕ್ಷಣಿಕ ಇಲಾಖೆಗಳು ನಡೆಸಿದ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದಿರುವ ಈ ಕೆಳಗಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

  1. ಚಿರಾಗ್ ಮಹಾಳೆ
    (Board State 6ನೇ ರ‍್ಯಾಂಕ್, JEE – 98.97% ತಾಲೂಕಿನಲ್ಲಿ ಪ್ರಥಮ, CET – 296 ನೇ ರ‍್ಯಾಂಕ್ ಗಳಿಸಿ
    ತಾಲೂಕಿನಲ್ಲಿ ಪ್ರಥಮ )
  2. ನಿಶಾ
    (Board State 6ನೇ ರ‍್ಯಾಂಕ್, JEE ಜಿಲ್ಲೆಯಲ್ಲಿ ಪ್ರಥಮ, CET (Agri) ದ್ವಿತೀಯ 245ನೇ ರ‍್ಯಾಂಕ್ ತಾಲೂಕಿನಲ್ಲಿ ಪ್ರಥಮ )
  3. ಈಶ ಶೆಟ್ಟಿ
    (NEET – 671 ನೇ ರ‍್ಯಾಂಕ್ ತಾಲೂಕಿನಲ್ಲಿ ಪ್ರಥಮ, JEE – 98.63% ಪಡೆದು ತಾಲೂಕಿನಲ್ಲಿ ಪ್ರಥಮ, CET Agriculture ನಲ್ಲಿ 224ನೇ ರ‍್ಯಾಂಕ್ ತಾಲೂಕಿನಲ್ಲಿ ಪ್ರಥಮ)

4.ನಾಗರಾಜ್ ಉಪ್ಪರ್
(Board State 590ರಲ್ಲಿ 9ನೇ ರ‍್ಯಾಂಕ್, CET – 572 ನೇ ರ‍್ಯಾಂಕ್, NEET – 635ನೇ ರ‍್ಯಾಂಕ್)

  1. ಸನ್ನಿಧಿ ಕುಲಾಲ್
    (Board State 591ರಲ್ಲಿ 8ನೇ ರ‍್ಯಾಂಕ್, CET – 1692 ನೇ ರ‍್ಯಾಂಕ್, NEET – 590ನೇ ರ‍್ಯಾಂಕ್)
  2. ಅನನ್ಯ ಉಡುಪ
    (Board State 590ರಲ್ಲಿ 9ನೇ ರ‍್ಯಾಂಕ್, CET – 530ನೇ ರ‍್ಯಾಂಕ್, NEET – 608ನೇ ರ‍್ಯಾಂಕ್)
  3. ಶಶಾಂಕ್ ಶೆಟ್ಟಿ (Board State 591ರಲ್ಲಿ 8ನೇ ರ‍್ಯಾಂಕ್, CET – 591ನೇ ರ‍್ಯಾಂಕ್, NEET – 585ನೇ ರ‍್ಯಾಂಕ್)
  4. ರಕ್ಷಾ ಆರ್. ಪೂಜಾರಿ (Board State 590ರಲ್ಲಿ 9ನೇ ರ‍್ಯಾಂಕ್, CET – 590ನೇ ರ‍್ಯಾಂಕ್, NEET – 557ನೇ ರ‍್ಯಾಂಕ್)
  5. ರಿತಿಕಾ ಶೆಟ್ಟಿ
    (CET – 2413ನೇ ರ‍್ಯಾಂಕ್, NEET – 563ನೇ ರ‍್ಯಾಂಕ್)
  6. ಎಂ. ಸೃಜನ್
    (CET – 2939ನೇ ರ‍್ಯಾಂಕ್, NEET – 592ನೇ ರ‍್ಯಾಂಕ್, JEE – 95.83%)
  7. ಗೌರವ್
    ( JEE – 95.64%)
  8. ವಿನುತಾ
    (CET – 4468ನೇ ರ‍್ಯಾಂಕ್, NEET – 612ನೇ ರ‍್ಯಾಂಕ್)
  9. ವರುಣ್ ಕೆ ಪಿ
    (CET – 1536ನೇ ರ‍್ಯಾಂಕ್, NEET – 585ನೇ ರ‍್ಯಾಂಕ್)
  10. ಆಶಿತಾ
    (CET – 3008ನೇ ರ‍್ಯಾಂಕ್, NEET – 584ನೇ ರ‍್ಯಾಂಕ್)
  11. ನಿರ್ಮಿತಾ ಎನ್ ಡಿ
    (CET – 4181ನೇ ರ‍್ಯಾಂಕ್, NEET – 583ನೇ ರ‍್ಯಾಂಕ್)
  12. ರುಮೇಝು ಶೈಖ್
    (NEET – 560ನೇ ರ‍್ಯಾಂಕ್)
  13. ಆಕಾಶ್ ಕೆ ಶೆಟ್ಟಿ
    (NEET – 520ನೇ ರ‍್ಯಾಂಕ್)
  14. ಸಂಜನಾ ಕೆ (CET – 4091ನೇ ರ‍್ಯಾಂಕ್, NEET – 514ನೇ ರ‍್ಯಾಂಕ್)
  1. ಸಮೃದ್ಧಿ
    (NEET – 513ನೇ ರ‍್ಯಾಂಕ್)
  2. ಅನಿರುದ್ಧ ಎಸ್ ಹತ್ವರ್
    (CET (Agri)- 787 ನೇ ರ‍್ಯಾಂಕ್)
  3. ಸನ್ಮಾನ
    (CET – 1998ನೇ ರ‍್ಯಾಂಕ್)
  4. ತಸ್ಯ ಶೆಟ್ಟಿ
    (CET – 2382ನೇ ರ‍್ಯಾಂಕ್)
  5. ಸಾಕ್ಷಿ ಜಿ ಹೆಗ್ಡೆ
    (CET – 3597ನೇ ರ‍್ಯಾಂಕ್)
  6. ಧನುಷ್
    (CET – 3702ನೇ ರ‍್ಯಾಂಕ್)
  7. ಶರಣ್ಯ
    (CET – 3829ನೇ ರ‍್ಯಾಂಕ್)
  8. ಪ್ರೀತಮ್ ಶೆಟ್ಟಿ
    (CET – 3976ನೇ ರ‍್ಯಾಂಕ್)
  9. ಸಿದ್ದಂಥ್
    (CS Foundation)
  10. ಶ್ರೇಯ ಎಂ.
    (CS Foundation)
  11. ಅಭಿಷೇಕ್ ಅಡಿಗ
    (Board 592 ರಲ್ಲಿ 7ನೇ ರ‍್ಯಾಂಕ್)
  12. ರಿತಣ್ಯ ನಾಯ್ಕ್
    (Board 591 ರಲ್ಲಿ 8ನೇ ರ‍್ಯಾಂಕ್)
  13. ಹರ್ಷಿತ ಡಿ. ಎಸ್.
    (Board 591 ರಲ್ಲಿ 8ನೇ ರ‍್ಯಾಂಕ್)
  14. ಸಾನ್ವಿ ಪಿ ಶೆಟ್ಟಿ
    (Board 589 ರಲ್ಲಿ 10ನೇ ರ‍್ಯಾಂಕ್)
  15. ಸಿಂಚನ ಬಸ್ರೂರು
    (Board 589 ರಲ್ಲಿ 10ನೇ ರ‍್ಯಾಂಕ್)
  16. ಸಿಂಚನ ಎಸ್ ಶೆಟ್ಟಿ
    (Board 589 ರಲ್ಲಿ 10ನೇ ರ‍್ಯಾಂಕ್)
  17. ನಿಶಾಂತ್
    (Board 554 ನೇ ರ‍್ಯಾಂಕ್)
  18. ಭೂಮಿಕಾ
    (Board 588 ನೇ ರ‍್ಯಾಂಕ್)
  19. ಪ್ರೀತಮ್
    (I PUC 36%, II PUC 94%)