ಡೈಲಿ ವಾರ್ತೆ: 28/ಜುಲೈ /2024

ಕೋಟ ಪಂಚವರ್ಣದ 218ನೇ ಭಾನುವಾರದ ಪರಿಸರಸೇಹಿ ಅಭಿಯಾನ – ಗಿಡಮರದ ಪೋಷಣೆ ಪ್ರತಿಯೊಬ್ಬರಿಂದಾಗಲಿ: ಕೆ.ತಾರಾನಾಥ್ ಹೊಳ್ಳ

ಕೋಟ: ಪರಿಸರದ ಬಗ್ಗೆ ಪ್ರತಿಯೊಬ್ಬರಿಗೂ ತುಡಿತ ಇರಬೇಕು,ತುಡಿತಿದ್ದರೆ ಸಾಲದು ಅದನ್ನು ನಿತ್ಯನಿರಂತ ಪೋಷಣೆ ಮಾಡುವ ಕಾರ್ಯ ಆಗಬೇಕಿದೆ ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಭಿಪ್ರಾಯಪಟ್ಟರು.
ಭಾನುವಾರ ಕಾರ್ಕಡ ಶಾಲಾ ವಠಾರದಲ್ಲಿ
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ ಪ್ರೆಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ, ಸಿನಿಯರ್ ಜೆಸಿಐ ಕೋಟ ಇವರ ಸಹಯೋಗದೊಂದಿಗೆ ಗೆಳೆಯರ ಬಳಗ ಕಾರ್ಕಡ ಸಂಯೋಜನೆಯೊಂದಿಗೆ ಹಸಿರು ಜೀವ 218ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಜನಸಾಮಾನ್ಯರು ಗಿಡ ನಡುವ ಕಾರ್ಯ ಸಾಂಕೇತಿಕಕ್ಕೆ ಸಿಮೀತವಾಗದೆ ಅದನ್ನು ಪೋಷಿಸಿ ಅದರ ಲಾಭವನ್ನು ನಾಲ್ಕಾರು ಮಂದಿಗೆ ಸಿಗುವಂತೆ ಮಾಡಬೇಕು ಪ್ರಸ್ತುತ ಅನುಭವಿಸುವ ತಾಪಮಾನವನ್ನು ಸಮತೋಲನಗೊಳಿಸಲು ಹಸಿರು ಅಭಿಯಾನ ಸಹಕಾರಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ,ಗಿರೀಜಾ ಪೂಜಾರಿ,ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್,ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ,ಕಾರ್ಯದರ್ಶಿ ಶೀನ ಕಾರ್ಕಡ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಪುಟಾಣ ಗಳು ಭಾಗವಹಸಿ ಗಿಡವನ್ನು ಕೊಂಡ್ಯೊಯ್ದರು.ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.