ಡೈಲಿ ವಾರ್ತೆ: 24/ಆಗಸ್ಟ್/2024

ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಬ್ರಹ್ಮಾವರ: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ SVVN ಶಾಲೆಯ ಮತ್ತು ಸ್ಥಳೀಯ ಅಂಗನವಾಡಿ ವಿದ್ಯಾರ್ಥಿಗಳಿಗೋಸ್ಕರ ಮುದ್ದು ಕೃಷ್ಣ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆ ಯ ಉದ್ಘಾಟನಾ ಕಾರ್ಯಕ್ರಮವನ್ನು ದಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಉಪಾಧ್ಯಕ್ಷರಾದ ಶ್ರೀ ಬಿ. ಸೀತಾರಾಮ ಶೆಟ್ಟಿರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಬಾರಕೂರಿನ ಅಧ್ಯಕ್ಷರಾದ ಶ್ರೀ ಶಾಂತರಾಮ್ ಶೆಟ್ಟಿ. ಬಿ. ರವರು ವಹಿಸಿದ್ದರು.

ವೇದಿಕೆಯಲ್ಲಿ ದಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ನ ಉಪಾಧ್ಯಕ್ಷರಾದ ಶ್ರೀ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ , ದಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಆಡಳಿತ ಕ್ಕೆ ಒಳಪಟ್ಟ ಎಲ್ಲಾ ವಿದ್ಯಾ ಸಂಸ್ಥೆಗಳ ಸಂಯೋಜಕರಾದ ಶ್ರೀ ಆರ್ಚಿ ಬಾಲ್ಡ್ ಫುಟಾರ್ದೋ , ದಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಕೋಶಾಧಿಕಾರಿ ಯಾದ ಶ್ರೀ ಕೃಷ್ಣ ಹೆಬ್ಬಾರ್, ಐ.ಟಿ. ಐ .ಹೇರಾಡಿ. ಈ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶ್ರೀ ರಾಮಚಂದ್ರ ಕಾಮತ್, ಶ್ರೀ ರುಕ್ಮಿಣಿ ಶೆಡ್ತಿ ಸ್ಮಾರಕ ನೇಷನಲ್ ಹಿರಿಯ ಪ್ರಾಥಮಿಕ ಶಾಲೆ ಹೇರಾಡಿ ಯ ಸಂಚಾಲಕರದ ಶ್ರೀ ರತ್ನಾಕರ ಶೆಟ್ಟಿ.SVVN ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ರಾಜ ರಾಮ್ ಶೆಟ್ಟಿ, ರೋಟರಿ ಕ್ಲಬ್ ಬಾರಕೂರಿನ ಅಧ್ಯಕ್ಷರಾದ ಶ್ರೀ ಗಣೇಶ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.

ಈ ಮುದ್ದು ಕೃಷ್ಣ ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀಮತಿ ವನಿತಾ ಉಪಾಧ್ಯ,ಚಿತ್ರಪಾಡಿ, ಶ್ರೀಮತಿ ಸುಜಾತಾ ಅಂದ್ರಾದೆ ಮತ್ತು ವೈಷ್ಣವಿ ಉರಾಳ ರವರು ಕಾರ್ಯ ನಿರ್ವಹಿಸಿದರು.

ವಿದ್ಯಾರ್ಥಿಗಳಾದ ಶಮಿತಾ, ವೃಷ್ಟಿ,ತನಿಷಾ, ಅಶ್ಮಿತಾಮತ್ತು ಧನ್ವಿ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ಪ್ರಾಸ್ತವಿಕ ಮಾತುಗಳನ್ನಾಡಿದರು.

ಈ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಪವಿತ್ರ, ಶ್ರೀಮತಿ ಚಂದ್ರ ಕಲಾ, ಶ್ರೀಮತಿ ರಕ್ಷಿತಾ ಶೆಟ್ಟಿ ಮತ್ತು ಸಮಾರೋಪ ಸಮಾರಂಭ ವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಶೆಟ್ಟಿ, ಶ್ರೀಮತಿ ರಾಧಿಕಾ, ಶ್ರೀಮತಿ ರೇಣುಕಾ ಶೆಟ್ಟಿ, ನಿರೂಪಿಸಿದರು,

ಶಾಲಾ ಶಿಕ್ಷಕಿ ಮಧುಶ್ರೀ ಮತ್ತು ಶಿಕ್ಷಕಿ ನಾಗರತ್ನ ಹೆಬ್ಬಾರ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಪರ್ಣ ಮತ್ತು ಶಿಕ್ಷಕ ಶ್ರೀ ಪೂರ್ಣೇಶ್ ರವರು ವಂದಿಸಿದರು.
ಶಿಕ್ಷಕಿಯರಾದ ಶ್ರೀಮತಿ ಶುಭ ರಾವ್ ಮತ್ತು ಶ್ರೀಮತಿ ಕುಸುಮ ಮತ್ತು ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು