ಡೈಲಿ ವಾರ್ತೆ: 30/ಆಗಸ್ಟ್/2024

ಸಾಸ್ತಾನ: ಸ. ಮಾ. ಕಿ. ಪ್ರಾ. ಶಾಲೆ ಗುಂಡ್ಮಿ ಇದರ ಹಳೆ ವಿದ್ಯಾರ್ಥಿಯಿಂದ ಶಾಲೆಗೆ ನೀರಿನ ಟ್ಯಾಪ್ ಹಾಗೂ ಬಾಗಿಲು ಕೊಡುಗೆ

ಕೋಟ: ಒಂದು ಕಾಲದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿತವರಾದರೂ ಮುಂದೆ ಸಾಗಿದ ಬಳಿಕ ಹಿಂದುರುಗಿ ನೋಡುವವರು ವಿರಳ.
ಆದರೆ ಇಲ್ಲಿ ಒಬ್ಬ ಹಳೆ ವಿದ್ಯಾರ್ಥಿ ಸಾಸ್ತಾನದಲ್ಲಿ A to Z ಸ್ಕ್ರಾಪ್ ಅಂಗಡಿ ಮಾಲೀಕ ರಜಾಕ್ ಸಾಸ್ತಾನ ಅವರು ತಾನು ಕಲಿತ ಶಾಲೆಯಾದ ಸರಕಾರಿ ಮಾದರಿ ಕಿರಿಯ ಶಾಲೆ ಗುಂಡ್ಮಿಯಲ್ಲಿ ಮಕ್ಕಳಿಗೆ ಕೈ ತೊಳೆಯಲು ನೀರಿನ ಟ್ಯಾಪ್ ಸಮಸ್ಯೆ ಹಾಗೂ ಶಾಲೆಯ ಬಾಗಿಲು ಹೋಗಿರುವುದನ್ನು ಗಮನಿಸಿದ ರಜಾಕ್ ಅವರು ನೀರಿನ ಟ್ಯಾಪ್ ವ್ಯವಸ್ಥೆ ಹಾಗೂ ಎರಡು ಬಾಗಿಲು ಮತ್ತು ಅದಕ್ಕೆ ಸಂಬಂಧ ಪಟ್ಟ ಕಡೆಗಳಿಗೆಲ್ಲ ಪೇಂಟಿಂಗ್ ಮಾಡಿ ಕೊಡುಗೆಯಾಗಿ ನೀಡಿದರು.

ರಜಾಕ್ ಅವರ ಉದಾರ ಕೊಡುಗೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.